ಬೆಂಗಳೂರು : ಸಿಲಿಂಡರ್ ಸ್ಫೋಟ.. ಇಬ್ಬರು ಸಾವು
ಬೆಂಗಳೂರು : ನಗರದ ಮಾಗಡಿ ರಸ್ತೆಯಲ್ಲಿರುವ ಎಂ ಎಂ ಫುಡ್ ಸ್ಟ್ರೀಟ್ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟಿದ್ದಾರೆ.
ಬಿಹಾರ ಮೂಲದ ಮನೀಶ್ ಹಾಗೂ ಸೌರಭ್ ಮೃತ ದುರ್ದೈವಿಯಾಗಳಾಗಿದ್ದಾರೆ. ಘಟನೆಯಲ್ಲಿ ಫ್ಯಾಕ್ಟರಿ ಪಾರ್ಟ್ನರ್ ಸಚಿನ್ ಗೆ ಗಂಭೀರ ಗಾಯಗಳಾಗಿವೆ.
ಇನ್ನು ಶಾಂತಿ, ಧನಲಕ್ಷ್ಮೀ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಎಂ.ಎಂ.ಫುಡ್ ಸ್ಟ್ರೀಟ್ ಕಾರ್ಖಾನೆಯಲ್ಲಿ ಖಾರ ಬೂಂದಿ ಸೇರಿದಂತೆ ಕುರುಕಲು ಪದಾರ್ಥಗಳನ್ನು ತಯಾರು ಮಾಡಲಾಗುತಿತ್ತು. ಫ್ಯಾಕ್ಟರಿಯಲ್ಲಿ 6 ರಿಂದ 8 ಜನರು ಕೆಲಸ ಮಾಡುತ್ತಿದ್ದರು.
ಆಹಾರ ತಯಾರಿಸುವ ಬಾಯ್ಲರ್ ಹೆಚ್ಚು ಹೀಟ್ ಆಗಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಕಾರ್ಮಿಕ ಮನೀಶ್ ಎಂಬಾತ ಸ್ಥಳದಲ್ಲೇ ಸಜೀವ ದಹನಗೊಂಡರೆ, ಮತ್ತೋರ್ವ ಕಾರ್ಮಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.









