ಕಾಬೂಲ್ ನಲ್ಲಿ ಒಂದು ಪ್ಲೇಟ್ ರೈಸ್ ಗೆ 7,500 ರೂ kabul saaksha tv
ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಜನರ ಬದುಕು ಭಯಂಕರವಾಗಿದೆ. ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿರುವ ಅಫ್ಘಾನ್ ಜನರು ಪ್ರತಿದಿನ ಸಾವಿನ ಜೊತೆ ಹೋರಾಟ ನಡೆಸುತ್ತಿದ್ದಾರೆ.
ಕಾಬೂಲ್ ಮೇಲೆ ತಾಲಿಬಾನಿಗಳು ಹಿಡಿತ ಸಾಧಿಸಿರುವುದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಭಾರಿ ಪರಿಣಾಮ ಬೀರಿದೆ.
ಈ ಮಧ್ಯೆ ದೇಶ ತೊರೆಯಲು ಆಫ್ಘಾನ್ ವಿಮಾನ ನಿಲ್ದಾಣ ತಲುಪಿರುವ ಜನರಿಗೆ ನರಕ ದರ್ಶನವಾಗುತ್ತಿದ್ದು, ಒಂದು ಬಾಟಲ್ ನೀರಿಗೆ ಮೂರು ಸಾವಿರ ರುಪಾಯಿ ನೀಡುವ ಕಠಿಣ ಪರಿಸ್ಥಿತಿ ಎದುರಾಗಿದೆ. ಇದಲ್ಲದೆ ಒಂದು ಪ್ಲೇಟ್ ರೈಸ್ ಗೆ 7,500 ರೂ. ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ಕೆಲ ಮಾರಾಟಗಾರರು ಡಾಲರ್ ನೀಡಿದ್ರೆ ಮಾತ್ರ ಆಹಾರ ನೀಡುತ್ತಿದ್ದಾರಂತೆ. ಕೆಲವರು ಆಹಾರವಿಲ್ಲದೇ ಕುಳಿತಲ್ಲಿಯೇ ಕುಸಿದು ಬೀಳುತ್ತಿರುವ ಬಗ್ಗೆ ವರದಿಯಾಗಿವೆ.
ಮತ್ತೊಂದು ಕಡೆ ಅಫ್ಘಾನ್ ಜನರ ಸಂಕಷ್ಟಕ್ಕೆ ಅಮೆರಿಕ ಸೈನಿಕರು ಸ್ಪಂದಿಸಿದ್ದು, ವಿಮಾನ ಏರಲು ಸರದಿ ಸಾಲಿನಲ್ಲಿ ನಿಂತಿರುವ ಜನ್ರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ.









