ಪಾದಚಾರಿಯ ಮೇಲೆ ಹರಿದ ಲಾರಿ : ಮಹಿಳೆ ಸಾವು kodagu saaksha tv
ಮಡಿಕೇರಿ : ಪಾದಚಾರಿಯ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಮಹಿಳೆ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದ ಸುಂಟಿಕೊಪ್ಪ ಗದ್ದೆಹಳ್ಳ ಬಳಿ ನಡೆದಿದೆ.
ಹಾಸನದ ರಾಮನಾಥಪುರದ ದಿಲ್ ಶಾದ್ (53) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.
ಮಹಿಳೆ ನಿಂತಿದ್ದ ಜಾಗದಲ್ಲೇ ಲಾರಿ ಮಗುಚಿ ಬಿದ್ದ ಪರಿಣಾಮ ಮಹಿಳೆ ಗುರುತು ಸಿಗದಷ್ಟರ ಮಟ್ಟಿಗೆ ಮೃತ ದೇಹ ನಜ್ಜುಗುಜ್ಜಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.









