ಬಾಲಿವುಡ್ ನ ಖ್ಯಾತ ನಟ ಸಿದ್ಧಾರ್ಥ್ ಶುಕ್ಲಾ ನಿಧನ..!
ಕಿರುತೆರೆಯಲ್ಲಿ ಮಿಂಚಿ , ಬಿಗ್ ಬಾಸ್ ನಲ್ಲಿ ಹೆಚ್ಚು ಖ್ಯಾತಿ ಗಳಿಸಿ ಬಾಲಿವುಡ್ ನಲ್ಲಿ ಹೆಸರು ಮಿಂಚುತ್ತಿದ್ದ 40 ವರ್ಷದ ನಟ ಸಿದ್ಧಾರ್ಥ್ ಶುಕ್ಲ ಹೃದಯಾಘಾತದಿಂದ ನಿಧನರಾಗಿದ್ದಾರೆ.. ಈ ಸುದ್ದಿಯಿಂದ ಅವರ ಅಭಿಮಾನಿಗಳಿಗೆ ಆಘಾತವಾಗಿದೆ. ಮುಂಬೈನ ಕೂಪರ್ ಆಸ್ಪತ್ರೆ ಶುಕ್ಲಾ ನಿಧನದ ವಿಚಾರವನ್ನ ಖಚಿತಪಡಿಸಿದೆ. ಬಿಗ್ ಬಾಸ್ ಸೀಸನ್ 13 ಹಾಗೂ ಟೆಲಿವಿಷನ್ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಶುಕ್ಲಾಗೆ ಸಾಕಷ್ಟು ಅಭಿಮಾನಿಗಳಿದ್ದರು.
ಬಿಗ್ ಬಾಸ್ 13ರ ವಿನ್ನರ್ ಸಹ ಆಗಿದ್ದರು. ಅಷ್ಟೇ ಅಲ್ದೇ ಬಿಗ್ ಬಾಸ್ 13 ರಲ್ಲಿ ಸಹ ಸ್ಪರ್ಧಿಯಾಗಿದ್ದ ಗಾಯಕಿ ಶೆಹನಾಜ್ ಗಿಲ್ ಹಾಗೂ ಶುಕ್ಲಾ ಜೋಡಿಗೆ ಸಾಕಷ್ಟು ಅಭಿಮಾನಿಗಳು ಇದ್ದರು.. ಇಬ್ಬರ ಕ್ಯೂಟ್ ಮೂಮೆಂಟ್ಸ್ ನ ವಿಡಿಯೋ ಕ್ಲಿಪ್ ಗಳು ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಲೇ ಇತ್ತು.. ಅಷ್ಟೇ ಅಲ್ದೇ ಶೆಹನಾಜ್ ಗಿಲ್ ಜೊತೆಗೆ ಶುಕ್ಲಾ ಕೆಲ ಆಲಬಂ ಸಾಂಗ್ ಗಳಲ್ಲಿಯೂ ಕಾಣಿಸಿಕೊಂಡಿದ್ದರು..
ಬಾಲಿಕಾ ವಧು ಅಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಶುಕ್ಲಾ ಕೆಲಸ ಮಾಡಿದ್ದಾರೆ. ನಟ ಮನೋಜ್ ಬಾಜಪೇಯಿ ಶುಕ್ಲಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ OMG !!! ಇದು ತುಂಬಾ ಆಘಾತಕಾರಿಯಾಗಿದೆ !!! ಅವರ ಹತ್ತಿರದ ಮತ್ತು ಆತ್ಮೀಯರಿಗೆ ಆಗಿರುವ ಆಘಾತ ದುಃಖವನ್ನ ವಿಬವರಿಸಲು ಕೂಡ ಪದಗಳು ಸಿಗುತ್ತಿಲ್ಲ. ರೆಸ್ಟ್ ಇನ್ ಪೀಸ್ ಎಂದು ಬರೆದುಕೊಂಡಿದ್ದಾರೆ”.
ಸಿದ್ಧಾರ್ಥ್ ಶುಕ್ಲಾ 2008 ರ ಬಾಬುಲ್ ಕಾ ಆಂಗನ್ ಚೂಟೇ ನಾ ಶೋನಲ್ಲಿ ಪ್ರಮುಖ ಪಾತ್ರ ನಿಭಾಯಿಸುವ ಮೂಲಕ ಬಣ್ಣದ ಜಗತ್ತಿಗೆ ಹೆಜ್ಜೆ ಇಟ್ಟಿದ್ದರು. 2014 ರಲ್ಲಿ, ಅವರು ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಅವರು ರಿಯಾಲಿಟಿ ಶೋಗಳಾದ ಬಿಗ್ ಬಾಸ್ 13 ಮತ್ತು ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 7. ವಿಜೇತರಾಗಿ ಹೊರಹೊಮ್ಮಿದರು.
ಪತ್ರಕರ್ತ ಚಂದನ್ ಮಿತ್ರ ನಿಧನ – ಪ್ರಧಾನಿ ಮೋದಿ ಸಂತಾಪ