ಬೆಳ್ಳಿ ಪರದೆ ಮೇಲೆ `ದಾದಾ’ ಬಯೋಪಿಕ್
ಭಾರತೀಯ ಕ್ರಿಕೆಟ್ ನ ದಾದಾ ಸೌರವ್ ಗಂಗೂಲಿ ಅವರ ಜೀವನಾಧಾರಿತ ಕಥೆಯುಳ್ಳ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ಈ ಸಿನಿಮಾವನ್ನು ಲವ್ ಫಿಲಂಸ್ ಸಂಸ್ಥೆ ನಿರ್ಮಿಸಲಿದೆ.
ಈ ಬಗ್ಗೆ ಸ್ವತಃ ಸೌರವ್ ಗಂಗೂಲಿ ಅವರೇ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ತಮ್ಮ ಬಯೋಪಿಕ್ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ನನ್ನ ಕ್ರಿಕೆಟ್ ಯಾನದ ಬಯೋಪಿಕ್ ಅನ್ನು ಲವ್ ಫಿಲಂಸ್ ನಿರ್ಮಿಸುತ್ತಿರುವುದು ಖುಷಿಯಾಗಿದೆ ಎಂದಿದ್ದಾರೆ.
ಅಲ್ಲದೆ ಕ್ರಿಕೆಟ್ ನನ್ನ ಉಸಿರಾಗಿದೆ. ನಾನು ತಲೆ ಎತ್ತಿ ಮುನ್ನಡೆಯಲು ಬೇಕಾದ ಆತ್ಮವಿಶ್ವಾಸ ಮತ್ತು ಸಾಮಥ್ರ್ಯವನ್ನು ಕ್ರಿಕೆಟ್ ನನಗೆ ನೀಡಿದೆ. ಈ ಪ್ರಯಾಣ ಅವಿಸ್ಮರಣೀಯ… ನನ್ನ ಪ್ರಯಾಣದ ಮೇಲೆ ಸಿನಿಮಾ ತಯಾರಾಗುತ್ತಿದ್ದು ಲವ್ ಫಿಲಂಸ್ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ ಎಂದು ದಾದಾ ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ಸಿನಿಮಾವನ್ನು ಪ್ಯಾರ್ ಕಾ ಪಂಚ್ ನಾಮ, ಆಕಾಶ್ ವಾಣಿ, ಎಂಬ ಚಿತ್ರಗಳನ್ನ ನಿರ್ದೇಶನ ಮಾಡಿರುವ ಲವ್ ರಂಜನ್ ಅವರು ನಿರ್ದೇಶಿಸುವ ಸಾಧ್ಯತೆಗಳಿವೆ.