ಮಧುಗಿರಿ ಮೋದಿ ವಿರುದ್ಧ ಎಫ್ ಐಆರ್
ಕೊಪ್ಪಳ : ಕೋಮುಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ ಎಂಬ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ, ಮಧುಗಿರಿ ಮೋದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರು ಅಂಗಡಿಗಳನ್ನು ಇಡಬಾರದು.
ಈಗ ಇರುವ ಅಂಗಡಿಗಳನ್ನು ಕೂಡಲೇ ಖಾಲಿ ಮಾಡಬೇಕೆಂದು ಮಧುಗಿರಿ ಮೋದಿ ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆ ಮಧುಗಿರಿ ವಿರುದ್ಧ ಗಂಗಾವತಿ ತಹಶಿಲ್ದಾರ್ ದೂರು ದಾಖಲಿಸಿದ್ದಾರೆ.
ಮಧುಗಿರಿ ಮೋದಿ ವಿರುದ್ಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 153(ಎ)(ರಾಷ್ಟೀಯ ಸಮಗ್ರತೆಗೆ ಬಾಧಕವಾಗುವ ಹೇಳಿಕೆ), 505(2)(ವರ್ಗಗಳ ನಡುವೆ ವೈರ, ದ್ವೇಷ ಅಥವಾ ವೈಮನಸ್ಯವನ್ನು ಉಂಟುಮಾಡುವ ಹೇಳಿಕೆ), 506(ಕ್ರಿಮಿನಲ್ ಬೆದರಿಕೆ) ಅಡಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಡಿ ಕೇಸ್ ದಾಖಲಾಗಿದೆ.









