ಟೀಂ ಇಂಡಿಯಾದ ಬಿಲಿಯನ್ ಚೀರ್ಸ್ ಜೆರ್ಸಿ ಅನಾವರಣ
ನವದೆಹಲಿ : ಇದೇ ತಿಂಗಳ 17 ರಿಂದ ಶುರುವಾಗಲಿರುವ ಚುಟುಕು ಕ್ರಿಕೆಟ್ ನ ಮಹಾ ಸಂಗ್ರಾಮಕ್ಕೆ ಟೀಂ ಇಂಡಿಯಾ ಹೊಸ ಜರ್ಸಿಯೊಂದಿಗೆ ಸಜ್ಜಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗುವ ಕೆಲ ತಂಡಗಳು ಈಗಾಗಲೇ ಹೊಸ ಜೆರ್ಸಿ ರಿವೀಲ್ ಮಾಡಿವೆ.
ಅದರಂತೆ ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ತನ್ನ ಜೆರ್ಸಿ ಅನಾವರಣ ಮಾಡಿದೆ.
ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಟ್ವೀಟ್ ಮಾಡಿದ್ದು, ಬಿಲಿಯನ್ ಚೀರ್ಸ್ ಜೆರ್ಸಿ ಅನಾವರಣ ಮಾಡಲಾಗುತ್ತಿದೆ.
ಇದಕ್ಕಾಗಿ ಶತಕೋಟಿ ಅಭಿಮಾನಿಗಳಿಂದ ಸ್ಫೂರ್ತಿ ಪಡೆದಿದ್ದೇವೆ ಎಂದು ಬರೆದುಕೊಂಡಿದೆ.
ಅಲ್ಲದೆ ಹೊಸ ಜರ್ಸಿಯಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬುಮ್ರಾ ಮಿಂಚಿರುವ ಫೋಟೋವನ್ನು ಬಿಸಿಸಿಐ ಹಂಚಿಕೊಂಡಿದೆ. ನೂತನ ಜೆರ್ಸಿಗೆ ‘ಬಿಲಿಯನ್ ಚೀರ್ಸ್ ಜೆರ್ಸಿ’ ಎಂದು ಹೆಸರಿಡಲಾಗಿದೆ. .
ಇನ್ನು ಟೀಂ ಇಂಡಿಯಾದ ಜೆರ್ಸಿ ಕಡು ನೀಲಿ ಬಣ್ಣದ್ದಾಗಿದೆ. ದಿಯಾನ್ ಮಾತ್ರ ವಿಭಿನ್ನವಾಗಿದೆ. ಜೆರ್ಸಿಯ ಮಧ್ಯದಲ್ಲಿ ತಿಳಿ ನೀಲಿ ಪಟ್ಟಿ ನೀಡಲಾಗಿದೆ.









