ಟಿ20 ವಿಶ್ವಕಪ್ನಲ್ಲಿ ಏಷ್ಯನ್ ಫೈಟ್- ಬಾಂಗ್ಲಾ-ಶ್ರೀಲಂಕಾ ಮ್ಯಾಚ್ ಗೆಲ್ಲೋದು ಯಾರು..?
ಒಂದು ಕಡೆ ಇಂಡೋ-ಪಾಕ್ ಮ್ಯಾಚ್.. ಮತ್ತೊಂದು ಕಡೆ ಬಾಂಗ್ಲಾ ಶ್ರೀಲಂಕಾ ಕದನ. ಟಿ20 ವಿಶ್ವಕಪ್ ನ ಮೊದಲ ಭಾನುವಾರ ಏಷ್ಯನ್ ಫೈಟ್ ನಡೆಯುತ್ತಿದೆ. ನಾಲ್ಕೂ ತಂಡಗಳು ಏಷ್ಯಾದ ರಾಷ್ಟ್ರಗಳೇ ಆಗಿವೆ. ಸೂಪರ್ ಸಂಡೇಯ ಮೊದಲ ಮ್ಯಾಚ್ ಶಾರ್ಜಾದಲ್ಲಿ ನಡೆಯಲಿದೆ. ಅರ್ಹತಾ ಸುತ್ತಿನಿಂದ ಸೂಪರ್ 12 ಪ್ರವೇಶಿಸಿರುವ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿವೆ.
ಎರಡೂ ತಂಡಗಳಲ್ಲೂ ಹೆಚ್ಚಿನ ವ್ಯತ್ಯಾಸ ಇಲ್ಲ. ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ಸೂಪರ್ ಆಲ್ ರೌಂಡರ್ ಆಗಿದ್ದರೆ, ವಹಿಂದು ಹಸರಂಗ ಲಂಕಾದ ಸ್ಟಾರ್ ಆಲ್ರೌಂಡರ್. ದುಶ್ಮಂತ ಚಾಮಿರಾ ಮತ್ತು ಲಹಿರು ಕುಮಾರ ಶ್ರೀಲಂಕಾದ ಫಾಸ್ಟೆಸ್ಟ್ ಬೌಲರ್ಗಳಾಗಿದ್ದರೆ, ಟಸ್ಕಿನ್ ಅಹ್ಮದ್ ಮತ್ತು ಮೊಹ್ಮದ್ ಸೈಫುದ್ದೀನ್ ಬಾಂಗ್ಲಾದ ಫಾಸ್ಟೆಸ್ಟ್ ಬೌಲರ್ಗಳು. ಬಾಂಗ್ಲಾದೇಶ ಮುಸ್ತಫಿಝುರ್ ಮೂಲಕ ಮಿಸ್ಟ್ರಿ ಬೌಲರ್ ಹೊಂದಿದ್ದರೆ, ಶ್ರೀಲಂಕಾ ಮಹೇಶ್ ತೀಕ್ಷಣ ಅನ್ನುವ ಮಿಸ್ಟ್ರಿ ಬೌಲರ್ ಹೊಂದಿದೆ. ಹೀಗಾಗಿ ಎರಡೂ ತಂಡಗಳ ಬಲಾಬಲ ಸಮವಾಗಿದೆ.
ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ ಎದುರಾಳಿಯನ್ನು ಬೇಗನೆ ಆಲೌಟ್ ಮಾಡಿ ಮೂರಕ್ಕೆ ಮೂರೂ ಪಂದ್ಯ ಗೆದ್ದಿದೆ. ಆದರೆ ಬಾಂಗ್ಲಾದೇಶ ಕಷ್ಟಪಟ್ಟು 2 ಪಂದ್ಯ ಗೆದ್ದು ಸೂಪರ್ 12 ಪ್ರವೇಶಿಸಿದೆ. ಇನ್ನು ಪಂದ್ಯ ನಡೆಯುವ ಶಾರ್ಜಾ ಪಿಚ್ ಸ್ಲೋ ಅಂಡ್ ಲೋ ಇರುವುದರಿಂದ ಬಿಗ್ ಸ್ಕೋರ್ ನಂಬಿಕೆ ಇಲ್ಲ. ಒಟ್ಟಿನಲ್ಲಿ ಏಷ್ಯಾದ ಎರಡು ತಂಡಗಳು ಅಖಾಡಕ್ಕೆ ಇಳಿಯುವುದರಿಂದ ಕುತೂಹಲ ಹೆಚ್ಚಿದೆ.
ಸಂಭಾವ್ಯ XI
ಶ್ರೀಲಂಕಾ
1. ಪತುನ್ ನಿಸ್ಸಂಕಾ, 2.ಕುಸಾಲ್ ಪೆರಾರ, 3. ಚರಿತ ಅಸಲಂಕ, 4. ಆವಿಷ್ಕಾ ಫೆರ್ನಾಂಡೊ, 5. ಭಾನುಕ ರಾಜಪಕ್ಸ, 6. ದಾಸುನ್ ಶನಕ, 7. ಚಮಿಕ ಕರುಣರತ್ನೆ, 8. ವಹಿಂದು ಹಸರಂಗ, 9. ಬಿನುರಾ ಫೆರ್ನಾಂಡೊ, 10. ಮಹೇಶ್ ತೀಕ್ಷಣ, 11.ಲಹಿರು ಕುಮಾರ
ಬಾಂಗ್ಲಾದೇಶ
1. ಮೊಹಮ್ಮದ್ ನಯೀಮ್, 2. ಲಿಟನ್ ದಾಸ್, 3. ಶಕೀಬ್ ಅಲ್ ಹಸನ್, 4. ಮುಷ್ಫಿಕರ್ ರಹೀಮ್, 5. ಮಹಮ್ಮದುಲ್ಲಾ, 6. ಆರೀಫ್ ಹುಸೈನ್, 7. ನುರುಲ್ ಹಸನ್, 8. ಮೆಹದಿ ಹಸನ್, 9. ಮೊಹಮ್ಮದ್ ಸೈಫುದ್ದೀನ್, 10. ಟಸ್ಕಿನ್ ಅಹ್ಮದ್, 11. ಮುಸ್ತಾಫಿಝುರ್ ರೆಹಮಾನ್









