“ಕನ್ನಡಕ್ಕಾಗಿ ನಾವು” ಅಭಿಯಾನಕ್ಕೆ ಸುನಿಲ್ ಕುಮಾರ್ ಚಾಲನೆ
ಬೆಂಗಳೂರು : 66 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಎಂಬ ವಿಶೇಷ ಅಭಿಯಾನಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನಿಲ್ ಕುಮಾರ್ ಚಾಲನೆ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕನ್ನಡಕ್ಕಾಗಿ ನಾವು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನಕ್ಕೆ ಬೆಂಗಳೂರು ನಗರದ ಲಾಲ್ ಬಾಗ್ ಸಸ್ಯತೋಟದಲ್ಲಿ ಕಿರು ನಾಟಕ #ಮಾತಾಡ್_ಮಾತಾಡ್_ಕನ್ನಡ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಲಾಗಿದೆ.
ಈ ಅಭಿಯಾನ ಇಂದಿನಿಂದ ಈ ತಿಂಗಳ 30 ರವರೆಗೂ ನಡೆಯಲಿದೆ. ಕನ್ನಡಕ್ಕಾಗಿ ನಾವು ಅಭಿಯಾನದ ಉದ್ದೇಶ ಕನ್ನಡದಲ್ಲಿ ಮಾತು ಮತ್ತು ಬರವಣಿಗೆ. ಅಕ್ಟೋಬರ್ 30ರ ವರೆಗೂ ಅಭಿಯಾನದ ಕುರಿತ ನಾಟಕ, ನೃತ್ಯ, ಸಂಗೀತ, ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ, ಗಡಿಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ.
ಅಭಿಯಾನ ಉದ್ಘಾಟನೆ ಬಳಿಕ ಮಾತನಾಡಿದ ಸಚಿವರು, ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನ ರಾಜ್ಯಾದ್ಯಂತ ಆರಂಭ ಆಗಿದೆ. ಮಾತಾಡ್ ಮಾತಾಡ್ ಸಂಕಲ್ಪ ಇಟ್ಟುಕೊಂಡು ನವೆಂಬರ್ 1ರವರೆಗೂ ಅಭಿಯಾನ ಇರುತ್ತದೆ ಎಂದು ತಿಳಿಸಿದರು.









