ಚೀನಾ | ಮಹಿಳೆಯ ಕಿವಿಯಲ್ಲಿ ಜೀವಂತ ಜೇಡ spider saaksha tv
ಚೀನಾ : ಚೀನಾದ ದಕ್ಷಿಣದಲ್ಲಿರುವ ಹುನಾನ್ ನ ಝೂಝೂ ಎಂಬ ಪ್ರದೇಶದ ಮಹಿಳೆಯ ಕಿವಿಯಲ್ಲಿ ಜೀವಂತ ಜೇಡ ಪತ್ತೆಯಾಗಿದೆ.
ಯೀ ಎಂಬ ಹೆಸರಿನ ಮಹಿಳೆಯೊಬ್ಬರು ಕಿವಿನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು.
ತಮಗೆ ತುಂಬಾ ನೋವಾಗುತ್ತಿದೆ, ಕಿವಿಯೊಳಕ್ಕೆ ಏನೋ ಇದೆ ಎನ್ನಿಸುತ್ತಿದೆ.
ಕಿವಿ ಕೂಡ ಸರಿಯಾಗಿ ಕೇಳುತ್ತಿಲ್ಲ ಎಂದು ಮಹಿಳೆ ವೈದ್ಯರ ಬಳಿ ಹೇಳಿದ್ದರು.
ಆಗ ವೈದ್ಯರು ಸ್ಕ್ಯಾನಿಂಗ್ ಮಾಡಿದ್ದು, ಕಿವಿಯಲ್ಲಿ ಕ್ರಿಮಿಯೊಂದು ಕಂಡುಬಂದಿದೆ.
ನಂತರ ಪರೀಕ್ಷೆ ಮಾಡಿದಾಗ ಅದು ಜೇಡರ ಹುಳು ಎಂದು ತಿಳಿದಿದೆ.
ಇದನ್ನು ನೋಡುತ್ತಿದ್ದಂತೆಯೇ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಳಿಕ ಇಲೆಕ್ಟ್ರಿಕ್ ಓಟೋಸ್ಕೋಪ್ ಬಳಸಿ ಜೇಡರವನ್ನು ಹೊರ ತೆಗೆದಿದ್ದಾರೆ.









