ಕಪಟಿ ಚೀನಾ , ಉಗ್ರರ ಡ್ಯಾಡಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ ಭಾರತ..!
ಒಡಿಶಾ : ಭಾರತವು ಇಂದೂ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಭಲ್ಯತೆ ಸಾಧಿಸುತ್ತಿದೆ. ಐಟಿ ಇರಬಹುದು, ಬಾಹ್ಯಾಕಾಶವಿರಬಹುದು, ರಕ್ಷಣಾ ವಲಯವಿರಬಹುದು ಎಲ್ಲೆಡೆ ಭಾರತವೂ ಇನ್ನೆತರೇ ದೇಶಗಳ ಸರಿಸಮನಾಗಿ ಮುನ್ನುಗ್ಗುತ್ತಿದೆ. ಇದೀಗ ಅಣ್ವಸ್ತ್ರ ಸಿಡಿತಲೆಯ ಖಂಡಾಂತರ ಕ್ಷಿಪಣಿ ಅಗ್ನಿ-5ರ ಯಶಸ್ವಿ ಪ್ರಯೋಗವನ್ನು ನಡೆಸಿದೆ ಭಾರತ.
ಹೌದು.. ಭೂಮಿಯಿಂದ ಭೂಮಿಗೆ ಚಿಮ್ಮುವ ಬರೋಬ್ಬರಿ 5 ಸಾವಿರ ಕಿಲೋಮೀಟರ್ ದೂರ ಕ್ರಮಿಸಬಲ್ಲ ಕ್ಷಿಪಣಿಯನ್ನು ಒಡಿಶಾದ ಬಾಲಸೋರ್ ಜಿಲ್ಲೆಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಯಶಸ್ವಿಯಾಗಿ ಪ್ರಯೋಗ ನಡೆಸಲಾಗಿದೆ. 3 ಹಂತಗಳ ಘನ ಇಂಧನ ಎಂಜಿನ್ ಅನ್ನು ಇದಕ್ಕೆ ಬಳಸಲಾಗಿದೆ. ಈ ಪ್ರಯೋಗದ ಮೂಲಕ ಭಾರತದ ಕಡುಬದ್ಧ ವೈರಿ ದೇಶಗಳಾದ ಕಪಟಿ ಚೀನಾ ಹಾಗೂ ಉಗ್ರರ ಡ್ಯಾಡಿ ಪಾಕಿಸ್ತಾನಕ್ಕೆ ಭಾರತ ನಡುಕ ಹುಟ್ಟಿಸಿದೆ.
ಚೀನಾದ ಯಾವುದೇ ಭಾಗವನ್ನು ಕೂಡ ಈ ಕ್ಷಿಪಣಿ ಮೂಲಕ ಭಾರತ ಟಾರ್ಗೆಟ್ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಏಷ್ಯಾದ ಎಲ್ಲಾ ಭಾಗವನ್ನು, ಆಫ್ರಿಕಾದ ಕೆಲ ಭಾಗಗಳನ್ನು, ಯುರೋಪ್ ಖಂಡವನ್ನು ತಲುಪಬಲ್ಲ ಸಾಮರ್ಥ್ಯ ಈ ಕ್ಷಿಪಣಿಗಿದೆ. ಈ ಮೂಲಕ ನಾವೇ ಗ್ರೆಟ್ ನಮ್ಮನ್ನ ಯಾರಿಂದಲೂ ಏನೂ ಮಾಡೋಕೆ ಸಾಧ್ಯವಿಲ್ಲ ಅಂತ ಬೀಗ್ತಿದ್ದ ಚೀನಾ ಹಾಗೂ ಅದರ ಗುಲಾಮಗಿರಿಯಲ್ಲೇ ಜೀವನ ಸವೆಸಿರುವ ಪಾಕಿಸ್ತಾನಕ್ಕೆ ಕಪಾಳಕ್ಕೆ ಬಾರಿಸಿದಂತಾಗಿದೆ.
ಕಳೆದ ಸೆಪ್ಟೆಂಬರ್ 23 ರಂದು ಇದರ ಯಶಸ್ವಿ ಪ್ರಯೋಗ ನಡೆಸಲಾಗಿತ್ತು. 17.5 ಮೀಟರ್ ಎತ್ತರದ ಈ ಕ್ಷಿಪಣಿ, 50 ಟನ್ ತೂಕ ಇದೆ. 1.5 ಟನ್ ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ. ಅಗ್ನಿ-5 ಖಂಡಾಂತರ ಬ್ಯಾಲಸ್ಟಿಕ್ ಕ್ಷಿಪಣಿ ಸಾಮರ್ಥ್ಯ ಸುಮಾರು 5 ಸಾವಿರದಿಂದ 6 ಸಾವಿರ ಕಿ.ಮೀ ವ್ಯಾಪ್ತಿ ಹೊಂದಿರುತ್ತದೆ. ಇದು ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಎರಡೂ ರೀತಿಯ ಸಿಡಿತಲೆಗಳನ್ನು ಕೊಂಡುಯ್ಯುವ ಸಾಮರ್ಥ್ಯವನ್ನು ಹೊಂದಿದೆ. 1989ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಲಾಗಿತ್ತು.








