ಅಪ್ಪುಗೆ ಹಾಲು-ತುಪ್ಪ ವಿಧಿ ವಿಧಾನ ಕಾರ್ಯ raj-family saaksha tv
ಬೆಂಗಳೂರು : ನಮ್ಮನ್ನೆಲ್ಲಾ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ ಕುಟುಂಬದಿಂದ ಇಂದು ಹಾಲು-ತುಪ್ಪ ವಿಧಿವಿಧಾನ ಕಾರ್ಯ ನಡೆಯಲಿದೆ.
ಹೀಗಾಗಿ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಮಾಧಿ ಬಳಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಪ್ಪು ಸಮಾಧಿಗೆ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿದೆ.
ಮತ್ತೊಂದೆಡೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಮಾಧಿಗೆ ನಮಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ರಾಜ್ ಕುಟುಂಬಸ್ಥರು ಬಂದು ಹಾಲು – ತುಪ್ಪ ಕಾರ್ಯ ಮುಗಿಸಿಕೊಂಡು ಹೋಗುವವರೆಗೂ ಬಳಿಕ ಎರಡು ದಿನಗಳ ನಂತರ ಅಭಿಮಾನಿಗಳಿಗೆ ಅಪ್ಪು ಸಮಾಧಿಯ ದರ್ಶನವಾಗಲಿದೆ.
ಆದರೂ ಇಂದು ಅಪ್ಪು ಸಮಾಧಿ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಹೀಗಾಗಿ ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸದ್ಯಕ್ಕೆ ಅಭಿಮಾನಿಗಳಿಗೆ ಪ್ರವೇಶಕ್ಕೆ ಅನುಮತಿಯಿಲ್ಲ ಎಂದು ತಿಳಿದುಬಂದಿದೆ.









