ಅಪಪ್ರಚಾರಕ್ಕೆ ಕಿವಿಗೊಡದೆ ನೈಜ ಇತಿಹಾಸದ ಪುಟಗಳಿಂದ ಟಿಪ್ಪುವನ್ನು ಅರಿಯೋಣ : ಸಿದ್ದರಾಮಯ್ಯ siddramaiah saaksha tv
ಬೆಂಗಳೂರು : ಅಪಪ್ರಚಾರಕ್ಕೆ ಕಿವಿಗೊಡದೆ ನೈಜ ಇತಿಹಾಸದ ಪುಟಗಳಿಂದ ಟಿಪ್ಪುವನ್ನು ಅರಿಯೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಇಂದು ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಶುಭಾಶಯ ತಿಳಿಸಿದ್ದಾರೆ.
ಸಿದ್ದರಾಮಯ್ಯ ತಮ್ಮ ಟ್ವೀಟ್ ನಲ್ಲಿ..
ಅಪ್ರತಿಮ ಸ್ವಾತಂತ್ರ್ಯ ಸೇನಾನಿ, ದಕ್ಷ ಆಡಳಿತಗಾರ ಮತ್ತು ಜಾತ್ಯತೀತನಾಗಿ ಸರ್ವರನ್ನೂ ಪೊರೆದ ಟಿಪ್ಪು ಸುಲ್ತಾನ್ ನಾಡಿನ ಹೆಮ್ಮೆ. ರಾಜಕೀಯ ಪ್ರೇರಿತ ಅಪಪ್ರಚಾರಕ್ಕೆ ಕಿವಿಗೊಡದೆ ನೈಜ ಇತಿಹಾಸದ ಪುಟಗಳಿಂದ ಟಿಪ್ಪುವನ್ನು ಅರಿಯೋಣ. ನಾಡ ಬಂಧುಗಳಿಗೆ ಟಿಪ್ಪು ಜಯಂತಿಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಇನ್ನು ಟಿಪ್ಪು ಜಯಂತಿ ವಿಚಾರವಾಗಿ ರಾಜ್ಯದಲ್ಲಿ ಪರ ವಿರೋಧ ವಾದಗಳು ಕೇಳಿಬರುತ್ತಿವೆ. ಬಿಜೆಪಿ ಟಿಪ್ಪು ಜಯಂತಿಯನ್ನು ಟೀಕಿಸಿ ರದ್ದು ಮಾಡಿದ್ದರೇ ಕಾಂಗ್ರೆಸ್ ನಾಯಕರು ಟಿಪ್ಪು ಜಯಂತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.