ರಾಣಾ ದಗ್ಗುಬಾಟಿ ವಿವಾಹದ ಅನ್ ಸೀನ್ಸ್ ವಿಡಿಯೋ ವೈರಲ್
ಟಾಲಿವುಡ್ ನ ನಟ ರಾಣಾ ದಗ್ಗುಬಾಟಿ ಕಳೆದ ವರ್ಷದ ಆಗಸ್ಟ್ 8 ರಂದು ಮೀಹಿಕಾ ಎಂಬೋರ ಜೊತೆ ಸಪ್ತಪದಿ ತುಳಿದರು.
ಕೊರೊನಾದಿಂದಾಗಿ ರಾಮಾನಾಯ್ಡು ಸ್ಟೂಡಿಯೋದಲ್ಲಿ ಕುಟುಂಬಸ್ಥರ ಸಮಕ್ಷಮದಲ್ಲಿ ರಾಣಾ ಮದುವೆ ನೆರವೇರಿತು.
ತೆಲುಗು-ಮಾರ್ವಾಡಿ ಸಾಂಪ್ರದಾಯಿಕದಂತೆ ಅಂಗರಂಗ ವೈಭವವಾಗಿ ಮದುವೆ ನಡೆದಿದ್ದು, ಇದೀಗ ಇತಿಹಾಸ.
ಆದ್ರೆ ಈಗ ಮದುವೆಗೆ ಸಂಬಂಧಿಸಿದ ವೀಡಿಯೋವೊಂದನ್ನು ರಾನಾ ಪತ್ನಿ ಮಿಹೀಕಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಪೆÇೀಸ್ಟ್ ಮಾಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಡುತ್ತಿದ್ದಂತೆ ಭಾರಿ ವೈರಲ್ ಆಗುತ್ತಿದೆ. ವೆಂಕಟೇಶ್ ಪುತ್ರಿ ಆಶ್ರಿತ, ಮಂಜು ಲಕ್ಷ್ಮೀ ಸೇರಿದಂತೆ ಹಲವರು ಪ್ರಮುಖರು ಕಾಮೆಂಟ್ಸ್ ಮಾಡಿದ್ದಾರೆ.