ಸದ್ಯದಲ್ಲೇ ರೆಡಿಯಾಗಲಿದೆ ಅಪ್ಪು ಬಯೋಪಿಕ್
ಬೆಂಗಳೂರು : ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಜರಾಮರವಾಗಿ ಕುಳಿತಿರುವ ಕನ್ನಡದ ರಾಜರತ್ನ ನಟ ಪುನೀತ್ ರಾಜ್ ಕುಮಾರ್ ಅವರ ಬಯೋಪಿಕ್ ಸದ್ಯದಲ್ಲೇ ಚಂದನವನದಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ.
ಈ ಕುರಿತು ಅಪ್ಪು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಸುಳಿವು ನೀಡಿದ್ದಾರೆ.
ಆನಂದ್ ರಾಮ್ ಅವರು ಇತ್ತೀಚೆಗೆ ಅಪ್ಪು ಅವರನ್ನು ಸ್ಮರಿಸುತ್ತಾ ನಿಮಲ್ಲಿ ಇದ್ದಂತ ನಿಷ್ಕಲ್ಮಶ ಮನಸು ಮಗುವಿನಷ್ಟೆ ಚಂದದ ಅಹಂ ಇಲ್ಲದ ನಗು ಎಲ್ಲಿಯೂ ಸಿಗದಂತದ್ದು ನಿಮ್ಮನ್ನು ಇಷ್ಟಪಡುತಿದ್ದ ಪ್ರತಿ ಮಕ್ಕಳಲ್ಲೂ ನೀವಿದ್ದಿರಾ.
ನಾನು ನೀವಿಲ್ಲ ಎಂದು ಬಾವಿಸುವುದಿಲ್ಲ, ನಿಮಗೆ ಸಂಬಂಧ ಪಟ್ಟ ಪ್ರತಿ ಪೆÇೀಸ್ಟ್ ನಲ್ಲೂ ನಿಮ್ಮನ್ನು ಟ್ಯಾಗ್ ಮಾಡ್ತೀನಿ. ನೀವು ನನಗೆ ಸದಾ ಜೀವಂತ ಅಂತ ಟ್ವೀಟ್ ಮಾಡಿದ್ದರು.
ಇದನ್ನು ಕಂಡ ಅಪ್ಪು ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಬಯೋಪಿಕ್ ನಿರ್ಮಿಸುವಂತೆ ಆನಂದ್ ರಾಮ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಆನಂದ್ ರಾಮ್ ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಅಪ್ಪುಬಯೋಪಿಕ್ ನಿರ್ಮಿಸೋ ಬಗ್ಗೆ ಚಿಂತನೆಯಿರೋದಾಗಿ ಹೇಳಿದ್ದಾರೆ.
ಅಷ್ಟೇ ಅಲ್ಲದೇ ಅಪ್ಪು ಅಭಿಮಾನಿ ಅಪ್ಪು ಸರ್ ಗೋಸ್ಕರ ಪ್ರತಿ ವರ್ಷ ಒಂದು ಹಾಡು ಮಾಡಿ! ಅದೇ ನಮ್ಮೆಲ್ಲರ ಆಂಥಮ್ ಆಗಿ ಇರುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಸಂತೋಷ್ ಆನಂದ್ ರಾಮ್ ಅವರು 100% ಪಕ್ಕಾ ಎಂದಿದ್ದಾರೆ.