7 ಸಿಕ್ಸರ್ಸ್.. 9 ಬೌಂಡರೀಸ್.. ರಸೆಲ್ ವಿಧ್ವಂಸ Russell saaksha tv
7 ಸಿಕ್ಸರ್ಸ್.. 9 ಬೌಂಡರೀಸ್.. ವಿಧ್ವಂಸಕ ಸೃಷ್ಟಿಸಿದ ಆಂಡ್ರೆ ರಸೆಲ್..!!
ಹೌದು..! ಅಬುಧಾಬಿಯಲ್ಲಿ ನಡೆದ ಟಿ 10 ಟೂರ್ನಿಯಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟಿದೆ.
ಅಬುಧಾಬಿ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗ್ಲಾಡಿಯೇಟರ್ಸ್ ತಂಡ ಡೆಲ್ಲಿ ಬುಲ್ಸ್ ತಂಡವನ್ನು 56 ರನ್ ಗಳಿಂದ ಸೋಲಿಸಿತ್ತು.
ಈ ಪಂದ್ಯದಲ್ಲಿ ಟಾಸ್ ಸೋತು ಡೆಕ್ಕನ್ ಗ್ಲಾಡಿಯೇಟರ್ಸ್ ಬ್ಯಾಟಿಂಗ್ ಇಳಿಯಿತು. ಗ್ಲಾಡಿಯೇಟರ್ಸ್ ಪರ ಆರಂಭಿಕರಾಗಿ ಕೀಸ್ ಗೆ ಬಂದ ರಸೆಲ್ ಮತ್ತು ಕೊಹ್ಲರ್ ಜೋಡಿ ಉತ್ತಮ ಆರಂಭ ನೀಡಿತು.
ಇವರಿಬ್ಬರು 159 ರನ್‍ಗಳ ಅಜೇಯ ಜೊತೆಯಾಟವಾಡಿದರು. ಪರಿಣಾಮ ಗ್ಲಾಡಿಯೇಟರ್ಸ್ ತಂಡವು ನಿಗದಿತ 10 ಓವರ್‍ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 159 ರನ್‍ಗಳ ಬೃಹತ್ ಗುರಿಯನ್ನು ನೀಡಿತು.
ಈ ಇನ್ನಿಂಗ್ಸ್ ನಲ್ಲಿ ಆಲ್ ರೌಂಡರ್ ಆಂಡ್ರೆ ರಸೆಲ್ ಡೆಲ್ಲಿ ಬುಲ್ಸ್ ಬೌಲರ್ ಗಳ ಬೆಂಡೆತ್ತಿದರು. ಬಾಲ್ ಇರೋದೇ ದಂಡಿಸೋಕೆ ಎಂಬಂತೆ ಬ್ಯಾಟ್ ಬೀಸಿದ ರಸೆಲ್, ಕೇವಲ 32 ಎಸೆತಗಳಲ್ಲಿ 90 ರನ್ ಚಚ್ಚಿಬೀಸಾಕಿದರು. ರಸೆಲ್ ಅವರ ಈ ವಿಧ್ವಂಸಕ ಇನ್ನಿಂಗ್ಸ್ ನಲ್ಲಿ 9 ಬೌಂಡರಿ ಹಾಗೂ 7 ಸಿಕ್ಸರ್ ಗಳಿವೆ.
ಇತ್ತ ಕೊಹ್ಲರ್ ಕೂಡ 3 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು.
ಇನ್ನು ಗ್ಲಾಡಿಯೇಟರ್ಸ್ ನೀಡಿದ ಬೃಹತ್ ಗುರಿಯ ಬೆನ್ನಟ್ಟಿದ್ದ ಡೆಲ್ಲಿ ಬುಲ್ಸ್ 10 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 103 ರನ್ ಗಳಷ್ಟೆ ಶಕ್ತವಾಯಿತು.
ಆ ಮೂಲಕ ಡೆಕ್ಕನ್ ಗ್ಲಾಡಿಯೇಟರ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.









