ಐಎಸ್ಎಲ್ : ಮುಂಬೈ ಸಿಟಿ ಎಫ್ ಸಿ ವಿರುದ್ಧ ಬೆಂಗಳೂರಿಗೆ ಸೋಲು Bangalore saaksha tv
ಗೋವಾ: ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ 18ನೇ ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ 1-3 ರಿಂದ ಮುಂಬೈ ಸಿಟಿ ಎಫ್ ಸಿ ವಿರುದ್ಧ ಸೋತು ನಿರಾಸೆ ಅನುಭವಿಸಿತು.
ಶನಿವಾರ ನಡೆದ ಪಂದ್ಯದಲ್ಲಿ ಬಿಎಫ್ ಸಿ ಸೋಲು ಕಂಡಿತು. ಈ ಮೂಲಕ ಬೆಂಗಳೂರು ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದು ಗೆಲುವು, ಒಂದು ಡ್ರಾ, ಎರಡು ಸೋಲುಗಳನ್ನು ಕಂಡಿದ್ದು, ನಾಲ್ಕು ಅಂಗಳೊಂದಿಗೆ ಎಳನೇ ಸ್ಥಾನದಲ್ಲಿದೆ.
ಮುಂಬೈ ತಂಡದ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು, ಒಂದು ಸೋಲು ಕಂಡಿದ್ದು ಒಂಬತ್ತು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಮುಂಬೈ ಪರ ಇಗೊರ್ ಅಂಗುಲೋ (9ನೇ ನಿಮಿಷ), ಮೌರ್ತಡಾ ಫಾಲ್ (54ನೇ ನಿಮಿಷ) ಹಾಗೂ ಯಗೋರ್ ಕ್ಯಾಟಟೌ (85ನೇ ನಿಮಿಷ) ಗೋಲು ಸಿಡಿಸಿ ಜಯದಲ್ಲಿ ಮಿಂಚಿದರು.
ಬೆಂಗಳೂರು ತಂಡದ ಪರ ಕ್ಲಿಟನ್ ಮೊದಲಾವಧಿಯ 20ನೇ ನಿಮಿಷದಲ್ಲಿ ಫಿಲ್ಡ್ ಗೋಲು ಬಾರಿಸಿ ಸೋಲಿನಲ್ಲಿ ಮಿಂಚಿದರು.
ಮೊದಲಾವಧಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಬಾರಿಸಿದ್ದರಿಂದ ಪಂದ್ಯ ಕುತೂಹಲ ಮೂಡಿಸಿತ್ತು. ಆದರೆ ಎರಡನೇ ಅವಧಿಯಲ್ಲಿ ಮುಂಬೈ ಎರಡು ಗೋಲು ಸಿಡಿಸಿ ಜಯ ಸಾಧಿಸಿತು.









