‘ತಲೈವಾ’ ಹುಟ್ಟುಹಬ್ಬ : ಮಿಸ್ ಮಾಡದೇ ನೋಡ್ಲೇ ಬೇಕಾದ ರಜನಿ ಸಿನಿಮಾಗಳು..!
ಚೆನ್ನೈ : ಕಾಲಿವುಡ್ ನ ಸೂಪರ್ ಸ್ಟಾರ್ ರಜನಿಕಾಂತ್ , ಅಭಿಮಾನಿಗಳ ‘ತಲೈವಾಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ರಜನಿಕಾಂತ್ ಇಂದು 71 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ರಜನಿಕಾಂತ್ ಅವರಿಗೆ ಕುಟುಂಬದವರು, ಸ್ನೇಹಿತರು,ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
70 ವರ್ಷ ವಯಸ್ಸಾದರೂ ಈಗಲೂ ಯಂಗ್ ಅಂಡ್ ಎನರ್ಜಿಟಿಕ್ ಆಗಿಯೇ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳು ‘ಎಂದಿರನ್’ ಗೆ ಅವರೇ ಸರಿಸಾಟಿ. ರಜನಿ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಅಭಿಮಾನಿಗಳನ್ನ ಹೊಂದಿದ್ದಾರೆ.. ಜಪಾನ್ ನಲ್ಲಂತೂ ರಜನಿಯನ್ನ ಆರಾಧ್ಯ ದೈವನಂತೆ ಕಾಣುವವರಿದ್ದಾರೆ…
ಅಂದ್ಹಾಗೆ ರಜನಿಗೆ ಅನೇಕ ಗಣ್ಯರು , ತಾರೆಯರು ವಿಶ್ ಮಾಡ್ತಿದ್ದಾರೆ..
ಅಂದ್ಹಾಗೆ ಸೂಪರ್ ಸ್ಟಾರ್ ರಜನಿಕಾಂತ್ ಸಾಕಷ್ಟು ಸೂಪರ್ ಹಿಟ್ ಎವರ್ ಗ್ರೀನ್ ಸಿನಿಮಾಗಳಲ್ಲಿ ನಟಿಸಿದ್ದಾರೆ..ಲಕ್ಷಾಂತರ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ..
ರಜನಿ ಕಾಂತ್ ಅವರ ಕೆಲ ಸಿನಿಮಾಗಳನ್ನ ಮಾತ್ರ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಲೇಬಾರದು.. ಅಂತಹ ಕೆಲ ರಜನಿ ಅವರ ಸೂಪರ್ ಸಿನಿಮಾಗಳ ಬಗ್ಗೆ ತಿಳಿಯಿರಿ..
ಅಪೂರ್ವ ರಾಂಗಂಗಳ್ – 1975
ಈ ಸಿನಿಮಾ ರಜನಿ ಕಾಂತ್ ಅವರ ಮೊದಲ ಸಿನಿಮಾ ಸಿನಿಮಾರಂಗದಲ್ಲಿ ಅವರನ್ನ ಪರಿಚಯ ಮಾಡಿಸಿಕೊಟ್ಟ ಸಿನಿಮಾ.. ಅಪೂರ್ವ ರಾಗಂಗಲ್ ಸಿನಿಮಾದಲ್ಲಿ ಕಮಲ್ ಹಾಸನ್, ಸುಂದರರಾಜನ್, ಮತ್ತು ಶ್ರೀವಿದ್ಯಾ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರ ತಾರಾಬಳಗವೇ ಇತ್ತು.. ಈ ಸಿನಿಮಾ ರಜನಿ ಅವರಿಗೆ ಚೊಚ್ಚಲ ಸಿನಿಮಾವಾಗಿದ್ರೂ , ತಮ್ಮದೇ ಪಾತ್ರದ ಮೂಲಕ ಜನರ ಮನಗೆದ್ದರು..
16 ವಾಯತಿನಿಲೆ – 1977
ಈ ಸಿನಿಮಾದಲ್ಲಿ ರಜನಿ ಕಾಂತ್ , ಕಮಲ್ ಹಾಸನ್ ಅವರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ರು. ಈ ಸಿನಿಮಾದಲ್ಲಿಯೂ ರಜನಿ ಪಾತ್ರದಲ್ಲಿ ರಜನಿ ನಟನೆ ಜನರ ಆಕರ್ಶಣೆಯನ್ನ ಆರಾಮಾಗಿ ತನ್ನತ್ತ ಸೆಳೆಯುವಂತೆ ಮಾಡಿತ್ತು,..
ಮುಲ್ಲಮ್ ಮಲರುಮ್ – 1978
ರಜನೀಕಾಂತ್ ಅವರು ಅತಿಹೆಚ್ಚು ಸಿನಿಪ್ರಿಯರ ಗಮನ ಸೆಳೆದ ಮೊದಲ ಚಿತ್ರವೆಂದರೆ ಅದು ಜೆ ಮಹೇಂದ್ರ ಅವರ ಸಾರಥ್ಯದ ಮುಳ್ಳುಂ ಮಲರಂ. ಚಿತ್ರದಲ್ಲಿ ರಜನಿಕಾಂತ್ ಅವರು ಕೇಬಲ್ ಟ್ರಾಲಿಯ ವಿಂಚ್ ಆಪರೇಟರ್ ಕಾಳಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅನಾಥ ಸಹೋದರಿಯ ಮೇಲಿನ ಪ್ರೀತಿ ಸಿನಿಮಾದ ಹೈಲೇಟ್..
ತಿಲ್ಲೂ ಮುಳ್ಳು – 1981
ಹಿಂದಿ ಚಿತ್ರ ಗೋಲ್ಮಾಲ್ (ಮೂಲ ರೋಹಿತ್ ಶೆಟ್ಟಿ ಆವೃತ್ತಿಯಲ್ಲ) ರಿಮೇಕ್ ಆಗಿರುವ ತಿಲ್ಲು ಮುಲ್ಲು ರಜನಿಕಾಂತ್ ಅವರ ಹಾಸ್ಯ ಪ್ರತಿಭೆಯನ್ನು ಮುನ್ನೆಲೆಗೆ ತಂದಿತು. ಕೆ ಬಾಲಚಂದರ್ ನಿರ್ದೇಶಕರ ಟೋಪಿಯನ್ನು ಧರಿಸುವುದರೊಂದಿಗೆ, ಚಿತ್ರವು ರಜನಿಕಾಂತ್ ಅವರ ಬಹುಮುಖತೆಯನ್ನು ಸಾಬೀತುಪಡಿಸಿತು. ದಳಪತಿ – 1991ಮಣಿರತ್ನಂ ಅವರ ಈ ಚಿತ್ರದಲ್ಲಿ ಮಹಾಭಾರತದ ಕರ್ಣನಿಂದ ಸ್ಫೂರ್ತಿ ಪಡೆದು ಸೃಷ್ಟಿಸಲಾಗಿದ್ದ ಸೂರ್ಯ ಪಾತ್ರದಲ್ಲಿ ರಜನಿ ಸಖತ್ ಗಮನ ಸೆಲೆದಿದ್ದರು.. ದುಃಖಿತ ಪ್ರೇಮಿಯಾಗಿ ಮತ್ತು ನಿಷ್ಠಾವಂತ ಸ್ನೇಹಿತನಾಗಿ, ದಳಪತಿ ರಜನಿಕಾಂತ್ ಅಭಿಮಾನಿಗಳ ಹೃದಯ ಗೆದ್ದಿದ್ದರು.. ಅಣ್ಣಾಮಲೈ – 19921992 ರಲ್ಲಿ ಬಿಡುಗಡೆಯಾದ ಅಣ್ಣಾಮಲೈ 1987 ರ ಹಿಂದಿ ಸಿನಿಮಾ ಖುದ್ಗರ್ಜ್‌ನ ರಿಮೇಕ್ . ಹಾಲಿನ ವ್ಯಾಪಾರಿ ಅಣ್ಣಾಮಲೈ ಮತ್ತು ಶ್ರೀಮಂತ ಹೋಟೆಲ್ ಉದ್ಯಮಿ ಅಶೋಕ್ ನಡುವಿನ ಅಸಂಭವ ಸ್ನೇಹದ ಹಿನ್ನೆಲೆಯಲ್ಲಿ ವರ್ಗ ಸಂಘರ್ಷದ ಜಟಿಲತೆಗಳ ಎಳೆ ಸಿನಿಮಾದಲ್ಲಿದೆ.. ಈ ಸಿನಿಮಾ ರಜನಿ ಅವರ ವರ್ಚಸ್ಸನ್ನ ಮತ್ತಷ್ಟು ಹೆಚ್ಚಿಸಿತ್ತು..
ಬಾಷಾ – 1995
1995 ರಲ್ಲಿ ಬಿಡುಗಡೆಯಾದ ಬಾಷಾ ಸಿನಿಮಾ ಮೂಲಕ ಆಟೋ-ಡ್ರೈವರ್ ಪಾತ್ರದಲ್ಲಿ ರಜನಿಕಾಂತ್ ಅಭಿಮಾನಿಗಳ ಮನಗೆದ್ದಿದ್ದರು..
ಪಡಿಯಪ್ಪ – 1999
ಪಡಿಯಪ್ಪ ಸಿನಿಮಾದಲ್ಲಿ, ರಜನಿಕಾಂತ್ ಅವರ ನಿಜವಾದ ಸೂಪರ್ಸ್ಟಾರ್ ಆಗಿ ಹೊರಹೊಮ್ಮಿದ್ರು.. ಚಿತ್ರದಲ್ಲಿ ಶಿವಾಜಿ ಗಣೇಶನ್, ರಮ್ಯಾ ಕೃಷ್ಣನ್, ದಿವಂಗತ ಸೌಂದರ್ಯ, ಅಬ್ಬಾಸ್, ಲಕ್ಷ್ಮಿ ಸೇರಿದಂತೆ ಸಾಕಷ್ಟು ಸ್ಟಾರ್ ಗಳನ್ನ ಒಳಗೊಂಡಿತ್ತು.
ಶಿವಾಜಿ – 2007
ಶಿವಾಜಿ ಸಿನಿಮಾ ಅಂತು ಜನ ಮಿಸ್ ಮಾಡಿಕೊಳ್ಳೊ ಹಾಗೆ ಇಲ್ಲ.. ಈ ಸಿನಿಮಾದಲ್ಲಿ ಕಾಮಿಡಿ ಇದೆ. ಆಕ್ಷನ್ ಇದೆ. ಪಂಚಿಂಗ್ ಡೈಲಾಗ್ಸ್ ಜೊತೆಗೆ ರಜನಿ ಸ್ಟೈಲ್ ಮಸ್ತ್ ಇದೆ.. ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ದೇಶದ ಕಲ್ಯಾಣದಲ್ಲಿ ಹೂಡಿಕೆ ಮಾಡಲು ಭಾರತಕ್ಕೆ ಆಗಮಿಸುತ್ತಾನೆ. ಅವನು ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿರುವಾಗ ಕೆಲವು ಭ್ರಷ್ಟ ಅಧಿಕಾರಿಗಳು ರಾಜಕಾರಣಿಗಳು ಅವನಿಗೆ ತೊಂದರೆ ಕೊಡೋದು ಅವರನ್ನ ಹೇಗೆ ತಮ್ಮದೇ ಸ್ಟೈಲ್ ನೊಂದಿಗೆ ಎದುರಿಸುತ್ತಾರೆ ಅನ್ನೋದೇ ಸ್ಟೋರಿ..
ಎಂದಿರನ್ ( ರೋಬೋ) – 2010
ಇಡೀ ಭಾರತೀಯ ಸಿನಿಮಾರಂಗ ಅದ್ರಲ್ಲೂ ಸೌತ್ ಇಂಡಸ್ಟ್ರಿ ಯಾವತ್ತೂ ಮರೆಯೋಕಾಗದೇ ಇರೋ ಸಿನಿಮಾ ಇದು.. ಸೌತ್ ಸಿನಿಮಾಗಳನ್ನ ತಾತ್ಸಾರವಾಗಿ ನೋಡ್ತಿದ್ದ ಬಾಲಿವುಡ್ ಅವರಿಗೆ ಸರಿಯಾಗಿಯೇ ಪೆಟ್ಟು ಕೊಟ್ಟು ಸೌತ್ ಪವರ್ ತೋರಿಸಿದ್ದ ಈ ಸಿನಿಮಾ ಸಾಕಷ್ಟು ರೆಕಾರ್ಡ್ ಗಳನ್ನೇ ಮಾಡಿತ್ತು.. ಈ ಸಿನಿಮಾದಲ್ಲಿ ಐಶ್ವರ್ಯ ರೈ ನಾಯಕಿಯಾಗಿ ಕಾಣಿಸಿಕೊಂಡಿದ್ರು.. ಚಿತ್ರದಲ್ಲಿ ರೋಬೋಟ್ ಬಗ್ಗೆ ಕಥೆ ನೋಡಬಹುದು.. ಎಸ್. ಶಂಕರ್ ಬರೆದು ನಿರ್ದೇಶಿಸಿದ 2010 ರ ವೈಜ್ಞಾನಿಕ ಕಾಲ್ಪನಿಕ ಸಾಹಸ ಚಲನಚಿತ್ರವಿದು.. ಅಲ್ಲದೇ ಇದೇ ಸಿನಿಮಾದ ಮತ್ತೊಂದು ಭಾಗ 2.0 ಎಂಬ ಶೀರ್ಷಿಕೆಯಡಿ ತೆರೆಕಂಡು, ಭಾರತದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಇತಿಹಾಸ ನಿರ್ಮಿಸಿತ್ತು..











