ರಮೇಶ್ ಕುಮಾರ್ ಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ ramesh kumar saaksha tv
ಕೋಲಾರ : ಸದನದಲ್ಲಿ ಅತ್ಯಾಚಾರ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕೋಲಾರದಲ್ಲಿ ಪ್ರಗತಿಪರ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಸ್ಪೀಕರ್ ಕಾಗೇರಿ, ರಮೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲರು ಮುಂದಾಗಬೇಕು. ಸದನದಲ್ಲಿ ಅತ್ಯಾಚಾರಕ್ಕೆ ಉತ್ತೇಜನ ನೀಡುವ ಮಾತುಗಳ ಮೂಲಕ ಮಹಿಳೆಯರಿಗೆ ಆಗೌರವ ತೋರಿಸಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಸದನದಿಂದ ಹೊರ ಹಾಕಬೇಕು ಎಂದು ಒತ್ತಾಯಿಸಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಸದನದಲ್ಲಿ ಮಾಜಿ ಸ್ಪೀಕರ್ ಹೇಳಿಕೆಗೆ ಮತ್ತೊಂದು ಕಡೆ ಹಾಲಿ ಸ್ಪೀಕರ್ ನಗುತ್ತಾರೆ. ಇಂತಹ ಅಯೋಗ್ಯರ ವರ್ತನೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಮಾನ ಮರ್ಯಾದೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ. ಸಮಾಜದಲ್ಲಿ ಇಂಥವರ ಹೇಳಿಕೆಗಳಿಂದ ಮಹಿಳೆಯರ ಮೇಲೆ ಶೋಷಣೆ ದಬ್ಬಾಳಿಕೆಗೆ ಶಾಸಕರೆ ಉತ್ತೇಜನ ನೀಡುತ್ತಿದ್ದಾರೆ. ಕ್ಷಮೆ ಕೇಳಿದರೆ ಸಾಲದು ರಾಜಿನಾಮೆ ಕೊಟ್ಟು ಸಾರ್ವಜನಿಕ ಜೀವನದಿಂದ ದೂರ ಹೋಗಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಆಗ್ರಹಿಸಿದ್ದಾರೆ.









