ಬೆಂಗಳೂರಿನಲ್ಲಿ ಮತ್ತೊಂದು ಮಾದಕ ಜಾಲ ಪತ್ತೆ drugs network saaksha tv
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮಾದಕ ಜಾಲ ಪತ್ತೆಯಾಗಿದೆ.
ನಗರದಲ್ಲಿ ಹೊಸ ವರ್ಷ ಬರುತ್ತಿದ್ದಂತೆ ಫುಲ್ ಅಲರ್ಟ್ ಆಗಿರುವ ಬೆಂಗಳೂರು ನಗರದ ಹೆಚ್ ಎ ಎಲ್ ಪೊಲೀಸರು ಮೂವರು ಗಾಂಜಾ ಮಾರಾಟಗಾರರನ್ನು ಬಂಧನ ಮಾಡಿದ್ದಾರೆ.
ಮುಬಾರಕ್, ಅಪ್ರೋಜ್, ಹಾಗೂ ಇಮ್ರಾನ್ ಬಂಧಿತ ಆರೋಪಿಗಳಾಗಿದ್ದರೆ.
ಇವರು ವಿಭೂತಿಪುರದ ತೋಪಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು.
ಇದರ ಖಚಿತ ಮಾಹಿತಿ ಮೇರೆಗೆ ಹೆಚ್ ಎಎಲ್ ಠಾಣಾ ಪೊಲೀಸರು ದಾಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಲ್ಲದೇ 9 ಕೆಜಿ ಗಾಂಜಾ , ಒಂದು ಬೈಕ್ ಹಾಗೂ ತೂಕದ ಮೆಷಿನ್ ವಶ ಪಡೆಸಿಕೊಂಡಿದ್ದಾರೆ.
ಈ ಸಂಬಂಧ ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









