ನನ್ನ ಸಿನಿಮಾ ಮುಗಿಸಲು ಪೈರಸಿ ಮಾಡಿದ್ದಾರೆ : ನಿಖಿಲ್ ಆಕ್ರೋಶ Nikhil kumaraswamy saaksha tv
ಮಂಡ್ಯ : ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ಪೈರಸಿಯಾಗಿದ್ದು, ಈ ಬಗ್ಗೆ ನಟ ನಿಖಿಲ್ ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ನಿಖಿಲ್, ಕೆಲವರು ನನ್ನ ಸಿನಿಮಾ ಮುಗಿಸಲು ಪೈರಸಿ ಮಾಡಿದ್ದಾರೆ. ಪೈರಸಿಯಿಂದ ನಿರ್ಮಾಪಕರು ಸಂಕಷ್ಟಕ್ಕೆ ಈಡಾಗುತ್ತಾರೆ.
ತಮಿಳು ಹ್ಯಾಕರ್ ಎಂಬ ವೆಬ್ ಸೈಟ್ ನಿಂದ ಪೈರಸಿಯಾಗಿದೆ. ಈಗಾಗಲೇ ಪೈರಸಿ ಮಾಡಿದವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ.
ದಯವಿಟ್ಟು ಪ್ರೇಕ್ಷಕರಲ್ಲಿ ಮನವಿ ಮಾಡುತ್ತೇನೆ ಕನ್ನಡ ಸಿನಿಮಾವನ್ನು ಥಿಯೇಟರ್ ನಲ್ಲಿ ಬಂದು ನೋಡಿ ಎಂದು ಮನವಿ ಮಾಡಿಕೊಂಡರು.
ಇನ್ನು ಕನ್ನಡ ಚಿತ್ರರಂಗವನ್ನು ಹಾಳುಮಾಡಲು ಕೆಲವರು ಪೈರಸಿ ಮಾಡಿದ್ದಾರೆ. ನಾನು ಸಾಕಷ್ಟು ಕನ್ನಡ ಸಿನಿಮಾಗಳನ್ನು ಮಾಡಬೇಕೆಂಬ ನಿರ್ಧಾರ ಮಾಡಿದ್ದೇನೆ.
ಇಪ್ಪತ್ತೈದು ವರ್ಷಗಳ ನಂತರ ನಾನು ಹಿಂತಿರುಗಿ ನೋಡಿದಾಗ ನನ್ನ ಲೈಬ್ರರಿ ಒಳ್ಳೆ ಸಿನಿಮಾಗಳನ್ನು ಮಾಡಿದ್ದೇನೆ, ಎಂಬ ಭಾವನೆ ಮೂಡಬೇಕು ಹಾಗಾಗಿ ಸಿನಿಮಾ ರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತೇನೆ.
ಸಮಯ ಬಂದಾಗ ನಾನು ರಾಜಕೀಯ ಮಾಡುತ್ತೇನೆ. ನನ್ನನ್ನು ನಂಬಿದ ಕಾರ್ಯಕರ್ತರಿಗೋಸ್ಕರ ರಾಜಕಾರಣ ಮಾಡುತ್ತೇನೆ ಎಂದು ತಿಳಿಸಿದರು.