ಮಿಮ್ಸ್ ಗೆ ಆಂಬುಲೆನ್ಸ್ ಕೊಡುಗೆ ಕೊಟ್ಟ ಸುಮಲತಾ ಅಂಬರೀಶ್ Mandya Mims saaksha tv
ಮಂಡ್ಯ : ಜಿಲ್ಲೆಯ ಜನರಿಗೆ ಅನುಕೂಲವಾಗಲಿ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯದ ಮಿಮ್ಸ್ ಗೆ ಆಂಬುಲೆನ್ಸ್ ಅನ್ನು ಕೊಡುಗೆ ನೀಡಿದ್ದಾರೆ.
ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಿಂದ ಸುಮಲತಾ ಅವರು ತುರ್ತು ಚಿಕಿತ್ಸಾ ಸೇವೆಗಾಗಿ ಆ್ಯಂಬುಲೆನ್ಸ್ ಕೊಡುಗೆ ಕೊಟ್ಟಿದ್ದಾರೆ.
ಇನ್ನು ಆಂಬುಲೆನ್ಸ್ ನಲ್ಲಿ ಐಸಿಯು ಸೌಲಭ್ಯವಿದ್ದು, ಸುಮಾರು 46 ಲಕ್ಷ ವೆಚ್ಚದ ರುಪಾಯಿಯದ್ದಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅವರು, ನೈಟ್ ಕರ್ಫ್ಯೂ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಸರ್ಕಾರ ಈ ರೀತಿಯ ಆದೇಶ ನೀಡಬೇಕಾದ್ರೆ, ತಜ್ಞರ ಸಲಹೆ ಪಡೆದು ಮಾಡಿರ್ತಾರೆ. ಯಾವ ಕಾರಣಕ್ಕೆ ನೈಟ್ ಕರ್ಫ್ಯೂ ವಿಧಿಸಿದ್ದಾರೆ ನನಗೆ ಗೊತ್ತಿಲ್ಲ.
ಸಿಟಿ ಗಳಲ್ಲಿ ಅದರ ಅಗತ್ಯ ಇದೆ. ನ್ಯೂ ಇಯರ್ ನಲ್ಲಿ ಹೆಚ್ಚು ಜನ ಸೇರುವುದರಿಂದ ಹೆಚ್ಚು ಕೊರೊನಾ ಸ್ಫೋಟ ಆಗಬಹುದು.
ಆ ದೃಷ್ಟಿಯಿಂದ ಕರ್ಫ್ಯೂ ಜಾರಿ ಮಾಡಿರಬಹುದು. ಎಲ್ಲರ ಹಿತ ರಕ್ಷಣೆಗಾಗಿ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ ಎಂದು ತಿಳಿಸಿದರು.









