ಪ್ರಿಯಕರನ ಕಳೆದುಕೊಂಡ ನೋವಿನಲ್ಲಿರುವ ಶೆಹನಾಜ್ ಗೆ ಈಗ ಮತ್ತೊಂದು ಶಾಕ್
ಶೆಹನಾಜ್ ಗಿಲ್…. ಬಿಗ್ ಬಾಸ್ ಹಿಂದಿ ಸೀಸನ್ 13 ರಲ್ಲಿ ಮನೆಯಲ್ಲಿ ಸದಾ ನಗುತ್ತಾ , ನಗಿಸುತ್ತಾ , ಕ್ಯೂಟ್ ಆಗಿ ಕಾಣಿಸಿಕೊಂಡಿದ್ದ ಸ್ಪರ್ಧಿ.. ವೃತ್ತಿಯಲ್ಲಿ ಗಾಯಕಿಯಾಇರುವ ಶೆಹನಾಜ್ ಅದೇ ಸೀಸನ್ ನಲ್ಲಿ ಸಹ ಸ್ಪರ್ಧಿಯಾಗಿದ್ದ ಸಿದ್ಧಾರ್ಥ್ ಶುಕ್ಲಾ ಜೊತೆಗೆ ಆತ್ಮೀಯತೆ ಹೊಂದಿದ್ದರು.. ಸಿದ್ಧಾರ್ಥ್ ಮತ್ತೆ ಶೆಹನಾಜ್ ಗಿಲ್ ಕ್ಯೂಟ್ ಕೆಮಿಸ್ಟ್ರಿಗೆ ವೀಕ್ಷಕರು ಫಿದಾ ಆಗಿದ್ರು.. ಅಲ್ದೇ ಇವರಿಬ್ಬರ ಜೋಡಿಗೆ ಅಪಾರ ಅಭಿಮಾನಿಗಳೂ ಇದ್ರೂ.. ಇವರ ವಿಡಿಯೋ ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿತ್ತು.. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು..
ಆದ್ರೆ ಸೆಪ್ಟೆಂಬರ್ ನಲ್ಲಿ ಸಿದ್ಧಾರ್ಥ್ ಶುಕ್ಲಾ ಹಠಾಟ್ ನಿಧನರಾದ್ರೂ.. ಇದರಿಂದ ಶೆಹನಾಜ್ ಗಿಲ್ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.. ತೀರ ಕುಗ್ಗಿ ಹೋಗಿದ್ದಾರೆ.. ಇದ್ರ ನಡುವೆಯೇ ಶೆಹನಾಜ್ ಗೆ ಮತ್ತೊಂದು ಆಘಾತವಾಗಿದೆ.. ಶೆಹನಾಜ್ ತಂದೆಯ ಮೇಲೆ ಕೆಲ ಅಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ. ಶೆಹನಾಜ್ ಗಿಲ್ ತಂದೆ ಸಂತೋಶ್ ಸಿಂಗ್ ಸುಖ್ ಅವರ ಮೇಲೆ ಶನಿವಾರ ರಾತ್ರಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಆದ್ರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ..
ರಾಜಕೀಯದಲ್ಲಿ ಸಕ್ರಿಯರಾಗಿರುವ ಸಂತೋಶ್ ಸಿಂಗ್ ಸುಖ್ ಇತ್ತೀಚೆಗಷ್ಟೆ ಬಿಜೆಪಿಗೆ ಸೇರಿದ್ದರು. ಶನಿವಾರ ರಾತ್ರಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಅವರು ಅಮೃತ್ ಸರದ ತಮ್ಮ ಮನೆಗೆ ಬರುವ ದಾರಿಯಲ್ಲಿ ಕಾರಿನ ಡ್ರೈವರ್ ಢಾಬಾ ಬಳಿಯೊಂದರಲ್ಲಿ ಕಾರು ನಿಲ್ಲಿಸಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಅಗಂತುಕರು ಸಂತೋಶ್ ಸಿಂಗ್ ಸುಖ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಸಂತೋಶ್ ಸಿಂಗ್ ಗೆ ಒಬ್ಬ ಗನ್ಮ್ಯಾನ್ ಸಹ ಇದ್ದರು. ಆದರೆ ಅವರು ಸಹಾಯಕ್ಕೆ ಧಾವಿಸುವ ವೇಳೆಗೆ ಇಬ್ಬರು ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಅಗಂತುಕರು ಗುಂಡು ಹಾರಿಸಿದರೂ ಸಹ ಸಂತೋಶ್ ಸಿಂಗ್ ಸೀಟಿನ ಬಳಿ ಬಚ್ಚಿಟ್ಟುಕೊಂಡು ಗುಂಡು ತಮಗೆ ತಾಗದಂತೆ ರಕ್ಷಣೆ ಪಡೆದುಕೊಂಡಿದ್ದಾರೆ. ಘಟನೆ ನಡೆದ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಸಂತೋಶ್ ದೂರು ದಾಖಲಿಸಿದ್ದಾರೆ.









