ನಾಯಕತ್ವದಲ್ಲಿಯೇ ವಿರಾಟ್ ‘ಕಿಂಗ್’ : ಆ ಸಾಧನೆ ಮಾಡಿದ ಏಕೈಕ ನಾಯಕ Virat kohli saaksha tv
ಐಸಿಸಿ ಪ್ರಶಸ್ತಿ ಗೆದ್ದಿಲ್ಲ ಅನ್ನೋ ಅಪವಾದದ ಹೊರತಾಗಿಯೂ ದ್ವಿಪಕ್ಷೀಯ ಸಿರೀಸ್ ಗಳಲ್ಲಿ ವಿರಾಟ್ ನಾಯಕತ್ವ ಗತ್ತು ಎಂತಹದ್ದು ಎಂದು ಇಡೀ ಕ್ರಿಕೆಟ್ ಜಗತ್ತಿಗೆ ಗೊತ್ತಿದೆ.
ಟೀಂ ಇಂಡಿಯಾ ಟೆಸ್ಟ್ ನಾಯಕನಾಗಿ ಅತ್ಯಧಿಕ ಯಶಸ್ಸಿನ ಪ್ರಮಾಣವನ್ನು ಹೊಂದಿರುವ ಆಟಗಾರನಾಗಿ ಕೊಹ್ಲಿಗೆ ಉತ್ತಮ ದಾಖಲೆ ಇದೆ.
ಅದರ ಮುಂದುವರೆದ ಭಾಗವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ ಕೊಹ್ಲಿ ನಾಯಕನಾಗಿ ಅಪರೂಪದ ಸಾಧನೆ ಮಾಡಿದ್ದಾರೆ.
2018 ರಿಂದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನೆಲದಲ್ಲಿ ಕನಿಷ್ಠ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದ ಮೊದಲ ನಾಯಕ ಎಂಬ ದಾಖಲೆಯನ್ನ ವಿರಾಟ್ ಬರೆದಿದ್ದಾರೆ.
2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಜೋಹಾನ್ಸ್ಬರ್ಗ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಆಫ್ರಿಕಾ ನೆಲದಲ್ಲಿ ಮೊದಲ ಗೆಲುವು ಸಾಧಿಸಿದ್ದರು. ಇದೀಗ ಸೆಂಚುರಿಯನ್ ನಲ್ಲಿ ಹರಿಣಗಳ ವಿರುದ್ಧ ಎರಡನೇ ಜಯ ಸಾಧಿಸಿದ್ದಾರೆ.
2018ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಡಿಲೇಡ್ ಮತ್ತು ಮೆಲ್ಬೋರ್ನ್ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆದ್ದಿತ್ತು. 2020-21ರ ಆಸೀಸ್ ಪ್ರವಾಸದ ಮೊದಲ ಟೆಸ್ಟ್ನಲ್ಲಿ ಕೊಹ್ಲಿ ನೇತೃತ್ವದಲ್ಲಿ ತಂಡ ಸೋತಿತ್ತು. ಆದರೆ, ವೈಯಕ್ತಿಕ ಕಾರಣಗಳಿಂದ ಕೊಹ್ಲಿ ಉಳಿದ ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು.ರಹಾನೆ ನಾಯಕತ್ವ ವಹಿಸಿಕೊಂಡರು. ನಂತರದ ನಡೆದಿದ್ದು, ಇತಿಹಾಸ.
2018 ರ ಇಂಗ್ಲೆಂಡ್ ಪ್ರವಾಸದಲ್ಲಿ ಟ್ರೆಂಟ್ ಬ್ರಿಡ್ಜ್ ನಲ್ಲಿ ಗೆದ್ದ ಕೊಹ್ಲಿ, 2021 ರ ಪ್ರವಾಸದದಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯ ಗೆದ್ದಿದ್ದಾರೆ. ಲಾರ್ಡ್ಸ್, ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ಇನ್ನು ವಿದೇಶದಲ್ಲಿ ಟೀಂ ಇಂಡಿಯಾ ಆಡಿದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಹುಡುಗರು ಗೆಲುವಿನ ನಗೆ ಬೀರಿದ್ದಾರೆ. 2018ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಮೆಲ್ಬೋರ್ನ್ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಇದೀಗ 2021ರಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 113 ರನ್ಗಳ ಜಯ ಸಾಧಿಸಿದೆ. ಈ ಮೂಲಕ ವಿದೇಶದಲ್ಲಿ ಎರಡು ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದ ಏಷ್ಯಾದ ಮೊದಲ ನಾಯಕ ಎಂಬ ಇತಿಹಾಸ ನಿರ್ಮಿಸಿದ್ದರೆ ಕೊಹ್ಲಿ.