ವಕೀಲರ ವಿರುದ್ಧ ಸರ್ಕಾರಿ ವೈದ್ಯನಿಂದ ವಾಮಾಚಾರ
ಹಾಸನ : ಹಿಮ್ಸ್ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ತಮ್ಮ ವಿರುದ್ಧ ವಾಮಾಚಾರ ಪ್ರಯೋಗಿಸಿದ್ದಾರೆ ಎಂದು ವಕೀಲ ಹಾಗೂ ಜಿಪಂ ಕೆಡಿಪಿ ಮಾಜಿ ಸದಸ್ಯ ಜಿ.ಪಂ ದೇವರಾಜೇಗೌಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಾಸನದ ರವೀಂದ್ರನಗರಲ್ಲಿ ವೈದ್ಯ ಡಾ.ಸುರೇಶ್ ವಾಮಾಚಾರ ನಡೆಸಿದ ವಸ್ತುಗಳನ್ನು ವಕೀಲರ ಮನೆ ಕಾಂಪೌಂಡ್ ಒಳಗೆ ಎಸೆದು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಕುಡಿಕೆ, ಕೋಳಿಯ ತಲೆ, ಕಾಲುಗಳು, ನಿಂಬೆಹಣ್ಣು, ಪ್ರಾಣಿಗಳ ಮೂಳೆಗಳು, ತಾಮ್ರದ ಮೊಳೆ ಹೊಡೆಯಲಾದ ಗೊಂಬೆ ಹಾಗೂ ಇತರೆ ವಸ್ತುಗಳನ್ನು ವೈದ್ಯ ಡಾ.ಸುರೇಶ್ ಎಸೆದಿದ್ದಾರೆ.
ಮನೆ ಸುತ್ತಮುತ್ತಲಿನ 9 ಸಿ.ಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಡಾ.ಸುರೇಶ್ ಅವರೇ ಕೃತ್ಯ ಎಸಗಿರುವುದು ದೃಢವಾಗಿದೆ.
ಡಾ.ಸುರೇಶ್ ಅಕ್ರಮವಾಗಿ ಕಟ್ಟಡ ಅಕ್ರಮ ನಿರ್ಮಿಸಿದ್ದಾರೆ ಎಂದು ವಕೀಲ ದೇವರಾಜೇಗೌಡ ನ್ಯಾಯಾಂಗ ಹೋರಾಟ ಮಾಡುತ್ತಿದ್ದರು.
ಡಾ.ಸುರೇಶ್ ನಿರ್ಮಿಸಿರುವ ಅಕ್ರಮ ಕಟ್ಟಡ ತೆರವು ಮಾಡುವಂತೆ ನಗರಸಭೆಗೆ ಕೋರ್ಟ್ ಆದೇಶಿಸಿತ್ತು
ಈ ದ್ವೇಷದ ಹಿನ್ನಲೆಯಲ್ಲಿ ಅಮಾವಾಸ್ಯೆ ದಿನದಂದು ವಕೀಲ ದೇವರಾಜೇಗೌಡ ವಿರುದ್ಧ ಡಾ.ಸುರೇಶ್ ವಾಮಾಚಾರ ಮಾಡಿಸಿ ಆ ವಸ್ತುಗಳನ್ನು ಎಸೆದು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಹಾಸನದ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









