ADVERTISEMENT
Wednesday, August 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ದೇಶದ ಏಕತೆಗಾಗಿ ಶ್ರಮಿಸಿದ ವೀರ ನೇತಾಜಿ ಸುಭಾಷ್ ಚಂದ್ರ ಬೋಸ್ 

Mahesh M Dhandu by Mahesh M Dhandu
January 23, 2022
in Newsbeat, State, ರಾಜ್ಯ
V Somanna subhash chandra bose jayantotsava saaksha tv
Share on FacebookShare on TwitterShare on WhatsappShare on Telegram

ದೇಶದ ಏಕತೆಗಾಗಿ ಶ್ರಮಿಸಿದ ವೀರ ನೇತಾಜಿ ಸುಭಾಷ್ ಚಂದ್ರ ಬೋಸ್

ಬೆಂಗಳೂರು : ನೇತಾಜಿ ಸುಭಾಸ್ ಚಂದ್ರ ಬೋಸ್ ಅಪ್ರತಿಮ ದೇಶಭಕ್ತ. ರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ ಭಾರತೀಯರ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸಿದವರು ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

Related posts

saakshatv.com/shivarajkumar-pan-india-movie-koormavatar-official-announcement

ಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಅಭಿನಯದ ಪ್ಯಾನ್-ಇಂಡಿಯಾ ಸಿನಿಮಾ ‘ಕೂರ್ಮಾವತಾರ್’ ಅಧಿಕೃತ ಘೋಷಣೆ; ಕುತೂಹಲ ಮೂಡಿಸಿದ ಟೈಟಲ್ ಟೀಸರ್

August 26, 2026
saakshatv.com/dr-vishnuvardhan-75th-birth-anniversary-amruthamahotsava-grand-event-bengaluru

ಸೆಪ್ಟೆಂಬರ್ 27ರಂದು ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’

August 26, 2026

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೇತಾಜಿ ಸುಭಾಷ್ ಚಂದ್ರ ಬೋಸ್ ಉದ್ಯಾನವನದಲ್ಲಿ‌ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ನಡೆದ ಸುಭಾಷ್ ಚಂದ್ರ ಬೋಸ್ ಅವರ ಜಯಂತ್ಯೋತ್ಸವದಲ್ಲಿ ಹಾಗೂ ಪರಾಕ್ರಮ ದಿನದಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಶ್ರಮಿಸಿದ ನೇತಾಜಿ ಅವರ ಜೀವನದ ಆದರ್ಶಗಳನ್ನು‌ ಮುಂದಿನ‌ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ. ಭಾರತವನ್ನು ಬ್ರಿಟಿಷ್ ಮುಕ್ತರನ್ನಾಗಿಸಿ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ತಮ್ಮದೇ ಆದಂಥ ಉಪಾಯಗಳನ್ನು ಹೂಡಿ ಯಶಸ್ವಿಯಾಗಿದ್ದರು. ಇದರ ಪರಿಣಾಮವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮೊದಲ ಬಾರಿಗೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟು ಅಲ್ಲಿ ತಿರಂಗಾ ಹಾರಿಸುವಲ್ಲಿ ಅವರು ಯಶಸ್ವಿಯಾಗಿದ್ದರು.

ನೇತಾಜಿ ಅವರ ಸಂದೇಶಗಳು ಇಂದಿಗೂ ಅನುಕರಣೀಯ. ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಇಂಥ ಅನೇಕರ ತ್ಯಾಗ ಮತ್ತು ಬಲಿದಾನದಿಂದ ನಾವೆಲ್ಲ ಈವತ್ತು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಇನ್ನು, ಇಡೀ ರಾಷ್ಟ್ರವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನವನ್ನು ಆಚರಿಸುತ್ತಿರುವ ಸಮಯದಲ್ಲಿ, ಗ್ರಾನೈಟ್‌ನಿಂದ ಮಾಡಿದ ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗುವುದು ಎಂದು ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಘೋಷಿಸಿದ್ದಾರೆ. ಅಪ್ರತಿಮ ನಾಯಕರೊಬ್ಬರ ಪುತ್ಥಳಿ ನಿರ್ಮಿಸುವುದರ ಬಗ್ಗೆ ಹೇಳಿದ ಅವರಿಗೆ ಭಾರತ ಋಣಿಯಾಗಿದೆ. ನೇತಾಜಿ ಅವರ ಸ್ಮರಣೆಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನೇತಾಜಿ ಅವರ ಹೆಸರಿನ ಉದ್ಯಾನವನ ನಿರ್ಮಿಸಿ ಅವರ ಪುತ್ಥಳಿ ಸ್ಥಾಪಿಸುವ ಮೂಲಕ ಅಪ್ರತಿಮ ವೀರನಿಗೆ ಋಣಿಯಾಗಿದ್ದೇವೆ. ಇನ್ನು ಮುಂದಿನ ನೇತಾಜಿ ಜಯಂತ್ಯೋತ್ಸವದ ವೇಳೆಗೆ ಅವರ ನುಡಿಗಳ- ಸಾಧನೆಗಳ ಬಗ್ಗೆ ಪುಸ್ತಕ ಹೊರತಂದು ಲಕ್ಷಕ್ಕೂ ಅಧಿಕ ಜನತೆಗೆ ಉಚಿತವಾಗಿ ಹಂಚುವ ಕಾರ್ಯ ನಡೆಯಲಿದೆ ಎಂದು ಹೇಳಿದರು.

V Somanna subhash chandra bose jayantotsava saaksha tv

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ ನೇತಾಜಿ ಅವರ‌ಮೇಲೆ ಬಹುಮುಖ್ಯವಾಗಿ ಪ್ರಭಾವ ಬೀರಿದವರು ಸ್ವಾಮಿ ವಿವೇಕಾನಂದರು. ಮಹಾತ್ಮ ಗಾಂಧಿ ಅವರಿಗೆ ನೇತಾಜಿ ಅವರ ಅಪ್ರತಿಮ ಶಕ್ತಿಯ ಬಗ್ಗೆ ಅದಮ್ಯ ನಂಬಿಕೆಯಿತ್ತು. ಆದರೆ ಗಾಂಧಿಯವರದ್ದು ಶಾಂತಿಪಥ, ನೇತಾಜಿಯವರದ್ದು ಕ್ರಾಂತಿಪಥ. ಸ್ವಾತಂತ್ರ್ಯ ಗಳಿಸಲು ರಕ್ತವನ್ನು ಬೇಕಿದ್ದರೂ ಕೊಡುತ್ತೇನೆ. ಸ್ವಾತಂತ್ರ್ಯ ಪುಕ್ಕಟೆಯಾಗಿ ದೊರಕುವಿದಲ್ಲ ಎಂದು ಹೇಳುವುದರ ಮೂಲಕ ದೇಶದ ಜನತೆಯನ್ನು ನೇತಾಜಿ ಬಡಿದೆಬ್ಬಿಸಿದ್ದರು.

ಬ್ರಿಟಿಷರನ್ನು‌ ಬಗ್ಗು ಬಡೆಯಲು ಕ್ರಾಂತಿಯ ಮಾರ್ಗವೇ ಸರಿ ಎಂದು ಹೋರಾಡಿದ ನೇತಾಜಿ ಅವರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ನೇತಾಜಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ, ನಿವೃತ್ತ ಸೈನಿಕರಾದ ಶ್ರೀ ಧನಂಜಯ್ ಮತ್ತು ಶ್ರೀ ಕೃಷ್ಣಗೌಡರವರಿಗೆ ಸನ್ಮಾನಿಸಲಾಯಿತು.

ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಸೋಮಶೇಖರ್, ವಿ.ಸೋಮಣ್ಣ ಪ್ರತಿಷ್ಠಾನದ ಕೋಶಾಧ್ಯಕ್ಷ ಡಾ.ನವೀನ್ ಸೋಮಣ್ಣ, ಮಂಡಲ ಬಿ.ಜೆ.ಪಿ.ಅಧ್ಯಕ್ಷ ವಿಶ್ವನಾಥಗೌಡರು, ಹಿರಿಯ ರಾಜಕೀಯ ಮುಖಂಡರು, ಕನ್ನಡ ಪರ ಹೋರಾಟಗಾರರಾದ ಪಾಲನೇತ್ರ, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶಿಲ್ಪ ಶ್ರೀಧರ್, ಶ್ರೀಧರ್, ಯುವ‌ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

Tags: #Saaksha TVSubhash Chandra Bosev somanna
ShareTweetSendShare
Join us on:

Related Posts

saakshatv.com/shivarajkumar-pan-india-movie-koormavatar-official-announcement

ಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಅಭಿನಯದ ಪ್ಯಾನ್-ಇಂಡಿಯಾ ಸಿನಿಮಾ ‘ಕೂರ್ಮಾವತಾರ್’ ಅಧಿಕೃತ ಘೋಷಣೆ; ಕುತೂಹಲ ಮೂಡಿಸಿದ ಟೈಟಲ್ ಟೀಸರ್

by admin
August 26, 2026
0

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಮತ್ತೊಂದು ಬೃಹತ್ ಪ್ಯಾನ್-ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶ್ರೀ ಮಹಾವಿಷ್ಣುವಿನ ಎರಡನೇ ಅವತಾರವಾದ 'ಕೂರ್ಮಾವತಾರ'ದ ಕಥಾಹಂದರವನ್ನು ಆಧರಿಸಿ ಸಿದ್ಧವಾಗುತ್ತಿರುವ ಈ...

saakshatv.com/dr-vishnuvardhan-75th-birth-anniversary-amruthamahotsava-grand-event-bengaluru

ಸೆಪ್ಟೆಂಬರ್ 27ರಂದು ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’

by admin
August 26, 2026
0

ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ ಅಂಗವಾಗಿ ಆಯೋಜಿಸಲಾಗುತ್ತಿರುವ ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಇಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ...

saakshatv.com/karthik-sharma-directorial-bhavantara-kannada-movie-ready-for-release

ಕಾರ್ತಿಕ್ ಶರ್ಮ ನಿರ್ದೇಶನದ ‘ಭಾವಾಂತರ’ ಸಿನಿಮಾ ಬಿಡುಗಡೆಗೆ ಸಜ್ಜು: ಗಮನ ಸೆಳೆದ ವಿಭಿನ್ನ ಪೋಸ್ಟರ್

by admin
August 26, 2026
0

ಬೆಂಗಳೂರು: ‘ವೀರ ಕನ್ನಡಿಗ’, ‘ಮ್ಯಾಜಿಕ್ ಅಜ್ಜಿ’ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ಹಾಗೂ 100ಕ್ಕೂ ಹೆಚ್ಚು ಧಾರಾವಾಹಿ-ಟಿವಿ ಶೋಗಳಿಗೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ಶರ್ಮ,...

saakshatv.com/nagabhushana-new-movie-announced-on-birthday-kasturi-talkies

ನಾಗಭೂಷಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ; 90ರ ದಶಕದ ಫ್ಯಾಮಿಲಿ ಡ್ರಾಮಾದಲ್ಲಿ ‘ಟಗರು ಪಲ್ಯ’ ಹೀರೋ

by admin
August 26, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ, 'ಟಗರು ಪಲ್ಯ' ಖ್ಯಾತಿಯ ನಾಗಭೂಷಣ್ ಅವರ ಜನ್ಮದಿನದ ಪ್ರಯುಕ್ತ ಅವರ ಹೊಸ ಚಿತ್ರದ ಅಧಿಕೃತ ಘೋಷಣೆಯಾಗಿದೆ. ಕಸ್ತೂರಿ ಟಾಕೀಸ್ ಬ್ಯಾನರ್‌ನಡಿ ನಿರ್ಮಾಪಕ...

saakshatv.com/sai-durga-tej-sambarala-yeti-gattu-shooting-completed-release-date-announced

ಸಾಯಿ ದುರ್ಗಾ ತೇಜ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ ‘ಸಂಬರಾಲ ಯೇಟಿ ಗಟ್ಟು’ ಶೂಟಿಂಗ್ ಕಂಪ್ಲೀಟ್; 2027ರ ಸಂಕ್ರಾಂತಿಗೆ ರಿಲೀಸ್

by admin
August 26, 2026
0

ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಆ್ಯಕ್ಷನ್-ಡ್ರಾಮಾ 'ಸಂಬರಾಲ ಯೇಟಿ ಗಟ್ಟು' (SYG) ಚಿತ್ರದ ಸಂಪೂರ್ಣ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಪ್ರತಿಷ್ಠಿತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram