ಟ್ಯುನಿಷಿಯ…. ದಕ್ಷಿಣ ಆಫ್ರಿಕಾದಲ್ಲಿನ ಈ ಸುಂದರ ದೇಶ ಸಾಕಷ್ಟು ವಿಶೇಷತೆಗಳನ್ನ ಒಳಗೊಂಡಿದೆ. ಈ ದೇಶದ ಸುಮಾರು 98 % ರಷ್ಟು ಜನರು ಇಸ್ಲಾಮ್ ಧರ್ಮವನ್ನ ಅನುಸರಿಸುತ್ತಾರೆ.
ಅಧಿಕೃತ ಹೆಸರು – ರಿಪಬ್ಲಿಕ್ ಆಫ್ ಟ್ಯುನೀಷಿಯಾ..
ದಕ್ಷಿಣ ಆಫ್ರಿಕಾದ ಉತ್ತರದಲ್ಲಿ ಸ್ಥಿತವಾಗಿರುವ ಅರಬ್ ರಾಷ್ಟ್ರ ಟ್ಯುನೇಷಿಯಾ..
ಈ ದೇಶಕ್ಕೆ ಮಾರ್ಚ್ 20 1956 ರಲ್ಲಿ ಫ್ರಾನ್ಸ್ ನಿಂದ ಸ್ವಾತಂತ್ರ್ಯ ಸಿಕ್ಕಿತ್ತು.
ಅಲ್ಜೀರಿಯಾ , ಲಿಬಿಯಾ ಜೊತೆಗೆ ಗಡಿ ಹಂಚಿಕೊಂಡಿದೆ.
ದೇಶದ ದಕ್ಷಿಣ ಭಾಗ ಸಹಾರ ಮರುಭೂಮಿ ಜೊತೆಗೆ ಕೂಡಿಕೊಂಡಿದೆ.
ಒಟ್ಟಾರೆ ಜನಸಂಖ್ಯೆ ಸುಮಾರು 1.17 ಕೋಟಿ.
70 % ಜನರು ನಗರಗಳಲ್ಲಿ ಇದ್ದರೆ ಉಳಿದ 30% ರಷ್ಟು ಪಜನರು ಗ್ರಾಮಗಳಲ್ಲಿ ವಾಸವಾಗಿದ್ದಾರೆ.
ಅಧಿಕೃತ ಭಾಷೆ ಅರೇಬಿಕ್. ಉಳಿದಂತೆ ಫ್ರೆಂಚ್ ಕೂಡ ಇಲ್ಲಿನ ಜನರು ಮಾತನಾಡ್ತಾರೆ
ಶಾಲೆಗಳಲಲ್ಲೂ ಮಕ್ಕಳಿಗೆ ಫ್ರೆಂಚ್ ಬೋಧಿಸಲಾಗುತ್ತದೆ.. ರಸ್ತೆ ಬದಿಯಲ್ಲೂ ಅಂಗಡಿ , ಹೋಟೆಲ್ , ರೆಸ್ಟೋರೆಮಟ್ ಗಳಲ್ಲಿ ಮೆನ್ಯೂ ಮತ್ತಿತರೇ ಮಾಹಿತಿಗಳನ್ನ ಅರೇಬಿಕ್ ಹಾಗೂ ಫ್ರೆಂಚ್ ಎರೆಡೂ ಭಾಷೆಗಳಲ್ಲಿ ಬರೆದಿರಾಗುತ್ತದೆ.
ದೇಶದ ರಾಜಧಾನಿ ಟ್ಯೂನಿಸ್
ಇಲ್ಲಿ ಒಬ್ಬ ಪುರುಷ ಓರ್ವ ಮಹಿಳೆಗಿಂತಲೂ ಹೆಚ್ಚು ಜನರನ್ನ ಮದುವೆಯಾಗುವಂತಿಲ್ಲ.. ಕಾನೂನು ಬಾಹಿರ , ಶಿಕ್ಷಾರ್ಹ ಅಪರಾಧ. ಇಸ್ಲಾಮಿಕ್ ದೇಶಾವಾದ ನಂತರವೂ ಈ ದೇಶದ ಮಹಿಳೆಯರು ಬುರ್ಖಾ ಧರಿಸುವುದನ್ನ ಇಷ್ಟ ಪಡುವುದಿಲ್ಲ. ಹಾಗೆಯೇ ಬುರ್ಕಾ ಧರಿಸಲೇಬೇಕೆಂಬ ಕಾನೂನು ಕೂಡ ಈ ದೇಶದಲ್ಲಿ ಇಲ್ಲ.
2017 ರವರೆಗೂ ಇದ್ದ ಒಂದು ಕಾನೂನನ್ನ ಅದೇ ವರ್ಷವೇ ಅಲ್ಲಿನ ಸರ್ಕಾರವು ರದ್ದು ಪಡಿಸಿದೆ.. ಟ್ಯುನಿಷಿಯಾದಲ್ಲಿನ ಮಹಿಳೆಯರನ್ನು ಯಾರಾದ್ರೂ ಅನ್ಯ ಧರ್ಮದ ಯುವಕರು ಪ್ರೀತಿಸಿದ್ರೆ , ಮದುವೆಯಾಗಲು ಬಯಸಿದ್ರೆ , ಅಂತಹ ಪುರುಷರು ಮೊದಲು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡು ಧರ್ಮ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯವಾಗಿತ್ತು.. ಆದ್ರೆ ಆ ಕಾನೂನನ್ನ ಇದೀಗ ತೆಗೆದುಹಕಾಲಾಗಿದೆ.
ಆಫ್ರಿಕಾದಲ್ಲಿ ವಿಶ್ವದ ಅತಿ ಹೆಚ್ಚು ಬಡ ದೇಶಗಳಿವೆ.. ಆದ್ರೆ ಟ್ಯುನೀಷಿಯಾವನ್ನು ಆಫ್ರಿಕಾದ ಅತಿ ಹೆಚ್ಚು ಶ್ರೀಮಂತ ದೇಶಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಈ ದೇಶದ ಎಕಾನಮಿ ಅಥವ ಆರ್ಥಿಕತೆಯ ಬಹುದೊಡ್ಡ ಮೂಲ ಕೃಷಿ , ಪ್ರವಾಸೋದ್ಯಮ , ಟೆಕ್ಸ್ ಟೈಲ್ಸ್ ಇಂಡಸ್ಟ್ರಿ. ಇಲ್ಲಿನ 35 % ರಷ್ಟು 18 ರಿಂದ 25 ವರ್ಷದ ಯುವಕರು ನಿರುದ್ಯೋಗಿಗಳಾಗಿದ್ದಾರೆ.
ಟ್ಯೂನಿಷಿಯನ್ ಕರೆನ್ಸಿ – ಟ್ಯುನಿಷಿಯನ್ ಡಿನಾರ್ – ಒಂದು ಟ್ಯುನಿಷಿಯನ್ ಡಿನಾರ್ ಭಾರತದ 26 ರೂಪಾಯಿಗೆ ಸಮ
ಇಲ್ಲಿನ ಜನಪ್ರಿಯ ಆಟ ಫುಟ್ ಬಾಲ್ , ಫೇಮಸ್ ಡಿಷ್ ಖುಷ್ ಖುಷ್ , ಶೀಶ್ ಕೆಬಾಬ್ , ಟ್ಯಾಗೀನ್ಸ್.
ಇಲ್ಲಿನ ರೋಮನರಿಂದ ನಿರ್ಮಿತವಾದ ಎಲ್ ಜಿ ಆಂಫಿ ಥಿಯೇಟರ್ ಲೋಕಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು ಸಮಯದಲ್ಲಿ ಸುಮಾರು 35 ಸಾವಿರ ಸಜನರು ಕೂರಬಹುದು. ಈ ದೇಶದ ಪ್ರಸಿದ್ಧ ಮ್ಯೂಸಿಯಮ್ ಬಾರ್ಡೋ ಗ್ರಾಂಥಾಲಯ
ನಮ್ಮಲ್ಲಿ ಶೋಕಾಚರಣೆ ವೇಳೆ ಬಿಳಿ ಬಣ್ಣ ಧರಿಸುತ್ತೇವೆ. ಪಾಶ್ಚಮಾತ್ಯ ದೇಶಗಳಲ್ಲಿ ಕಪ್ಪು.. ಆದ್ರೆ ಆಫ್ರಿಕನ್ ದೇಶಗಳಲ್ಲಿ ಕೆಂಪು ಶೋಕದ ಪ್ರತೀಕವಾಗಿದೆ. ಈ ದೇಶದಲ್ಲಿ ಅಂತಿಮ ದರ್ಶನದ ಸಮಯದಲ್ಲಿ ಜನರು ಕೆಂಪು ಬಟ್ಟೆ ಧರಿಸುತ್ತಾರೆ. ಇಲ್ಲಿನ ಅತಿ ಉದ್ದದ ಪರ್ವತ ಮೌಂಟ್ ಜೆಬೆಲ್ ( ಸುಮಾರು 5066 ಅಡಿ ).
ಈ ದೇಶದಲ್ಲಿ ಒಟ್ಟಾರೆ 17 ರಾಷ್ಟ್ರೀ ಉದ್ಯಾನನವನಗಳಿವೆ. ಇವುಗಳ ಪೈಕಿ ಇಚ್ಕ್ಯೂಲ್ ನ್ಯಾಷನಲ್ ಪಾರ್ಕ್ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ.










