Shafali Verma : ಚರಿತ್ರೆ ಸೃಷ್ಟಿಸಿದ ಶಫಾಲಿ.. ಇದೇ ಮೊದಲು
ಐಸಿಸಿ ಟಿ 20 ಮಹಿಳಾ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾದ ಆಟಗಾರ್ತಿ ಶಫಾಲಿ ವರ್ಮಾ ಘರ್ಜಿಸಿದ್ದಾರೆ. ಇತ್ತೀಚೆಗೆ ಪ್ರಕಟವಾದ ಬ್ಯಾಟ್ಸ್‌ವುಮನ್ ಶ್ರೇಯಾಂಕದಲ್ಲಿ ಶಫಾಲಿ 726 ಅಂಕಗಳೊಂದಿಗೆ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಮತ್ತೊಬ್ಬ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ 709 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಗಾಯಗೊಂಡು ಹೊರಗುಳಿದಿದ್ದ ಆಸ್ಟ್ರೇಲಿಯದ ಬ್ಯಾಟರ್ ಬೆಥ್ ಲೆಹೆಮ್ 724 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯದ ನಾಯಕಿ ಮೆಗ್ ಲ್ಯಾನಿಂಗ್ ಇಂಗ್ಲೆಂಡ್ ವಿರುದ್ಧದ ಮೊದಲ T20I ಸರಣಿಯಲ್ಲಿ 64 ರನ್‌ಗಳ ಮಿಂಚಿನ ಇನ್ನಿಂಗ್ಸ್ ಆಡಿ 714 ಅಂಕಗಳೊಂದಿಗೆ ಮೂರನೇ ಸ್ಥಾನದ್ದಾರೆ. ಇದೇ ಪಂದ್ಯದಲ್ಲಿ ಆಲ್‌ರೌಂಡರ್ ತಹಿಲಾ ಮೆಕ್‌ಗ್ರಾತ್ 91ರ ಸುನಾಮಿ ಇನ್ನಿಂಗ್ಸ್‌ನೊಂದಿಗೆ ಶ್ರೇಯಾಂಕದಲ್ಲಿ 29 ಸ್ಥಾನ ಮೇಲೇರಿ 28ನೇ ಸ್ಥಾನಕ್ಕೆ ತಲುಪಿದ್ದಾರೆ
ಆಲ್ ರೌಂಡ್ ವಿಭಾಗದಲ್ಲಿ ಶ್ರೀಲಂಕಾದ ಚಮೇರಿ ಅಗ್ರ ಹತ್ತರೊಳಗೆ ಸ್ಥಾನ ಪಡೆದಿರುವುದು ವಿಶೇಷ. ಚಮೇರಿ ಬ್ಯಾಟಿಂಗ್ ನಲ್ಲಿ 8ನೇ ಹಾಗೂ ಆಲ್ ರೌಂಡರ್ ವಿಭಾಗದಲ್ಲಿ ಏಳನೇ ಸ್ಥಾನದಲ್ಲಿದ್ದಾರೆ.









