Telangana | ಹುಂಜಕ್ಕೆ ಟಿಕೆಟ್ ಕೊಟ್ಟ ಕಂಡಕ್ಟರ್ Bus conductor charge the ticket price to the rooster
ತೆಲಂಗಾಣ : ಸರ್ಕಾರಿ ಬಸ್ ಕಂಡಕ್ಟರ್ ಒಬ್ಬರು ಹುಂಜಕ್ಕೆ ಬಸ್ ಟಿಕೆಟ್ ನೀಡಿರುವ ಘಟನೆ ತೆಲಂಗಾಣದ ಸುಲ್ತಾನಾಬಾದ್ ನಲ್ಲಿ ನಡೆದಿದೆ.
ತ್ರಿಪಾಟಿ ಎನ್ನುವ ಬಸ್ ಕಂಡಕ್ಟರ್ ಪ್ರಯಾಣಿಕ ಜತೆ ಇದ್ದ ಹುಂಜಕ್ಕೆ 30 ರೂ. ಟಿಕೆಟ್ ನೀಡಿದ್ದಾನೆ.
ಈ ಘಟನೆಯ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೋ ನೋಡಿದ ತೆಲಂಗಾಣ ರಸ್ತೆ ಸಾರಿಗೆ ಸಂಸ್ತೆಯ ಅಧಿಕಾರಿಗಳು ಕಂಡಕ್ಟರ್ ವಿರುದ್ಧ ಗರಂ ಆಗಿದ್ದಾರೆ.
ಯಾಕಂದರೇ, ಸಾರಿಗೆ ನಿಯಮದ ಪ್ರಕಾರ, ಬಸ್ಗಳಲ್ಲಿ ಪ್ರಾಣಿಗಳನ್ನು ಸೇರಿಸುವಂತಿಲ್ಲ.
ಹೀಗಿದ್ದಾಗಲೂ ಕಂಡಕ್ಟರ್ ಪ್ರಯಾಣಿಕ ಹುಂಜವನ್ನು ಹಿಡಿದುಕೊಂಡಿದ್ದರೂ ಅವರನ್ನು ಬಸ್ನಿಂದ ಇಳಿಸದೆ ಟಿಕೆಟ್ ನೀಡಿದ್ದು ತಪ್ಪು ಎಂದು ಕಂಡಕ್ಟರ್ ವಿರುದ್ದ ಕ್ರಮ ಕೈಗೊಂಡಿದ್ದಾರೆ.









