ಬೆಂಗಳೂರು : ರೌಡಿ ಹಿನ್ನೆಲೆಯ ವ್ಯಕ್ತಿಯನ್ನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಮಾಡಿದ ಕಾಂಗ್ರೆಸ್ ಪಕ್ಷ ದೇಶಕ್ಕೆ ಯಾವ ಸಂದೇಶ ನೀಡುತ್ತಿದೆ? ಇದು ಯುವ ಕಾಂಗ್ರೆಸ್ಸೋ ಅಥವಾ ರೌಡಿ ಕಾಂಗ್ರೆಸ್ಸೋ ಎಂದು ಬಿಜೆಪಿ ಪ್ರಶ್ನಿಸಿದೆ. mohammed nalapad Karnataka Bjp slams congress saaksha tv
ಮಹಮ್ಮದ್ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಮಹಮ್ಮದ್ ನಲಪಾಡ್ ಅವರನ್ನು ರೌಡಿ ಚಟುವಟಿಕೆಯ ಕಾರಣಕ್ಕಾಗಿ 2018 ರಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲಕ್ಕೆ ಕೆಪಿಸಿಸಿ ಅಧ್ಯಕ್ಷರು ಉಚ್ಚಾಟನೆ ಮಾಡಿದ್ದರು. ಅದೇ ನಲಪಾಡ್ ಕೇವಲ 4 ವರ್ಷಗಳಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆ. ಎಂತಹ ವೈಚಿತ್ರ್ಯವಿದು!?
ಒಮ್ಮೆ ತಲೆ ಕಡಿಯುತ್ತೇನೆ ಎನ್ನುತ್ತಾರೆ, ಮತ್ತೊಬ್ಬರ ಕಾಲು ಮುರಿಯುತ್ತಾರೆ, ಮಗದೊಮ್ಮೆ ಅಮಾಯಕರ ಗುರುತು ಸಿಗದಂತೆ ಮುಖ ಜಜ್ಜುತ್ತಾರೆ. ಅದೇ ವ್ಯಕ್ತಿ ಈಗ ಯುವ ಕಾಂಗ್ರೆಸ್ ಅಧ್ಯಕ್ಷ!!! ದೇಶಕ್ಕೆ ಕಾಂಗ್ರೆಸ್ ಪಕ್ಷ ಯಾವ ಸಂದೇಶ ನೀಡುತ್ತಿದೆ!?
ಗುರುವಿಗೆ ತಕ್ಕ ಶಿಷ್ಯ. ಕೆಪಿಸಿಸಿ ಅಧ್ಯಕ್ಷರಿಗೆ ಕೊತ್ವಾಲ್ ಗ್ಯಾಂಗ್ ಶ್ರೀರಕ್ಷೆಯಿತ್ತು. ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಿಗೆ ಬಿಟ್ ಕಾಯಿನ್ ಗ್ಯಾಂಗ್ ನಂಟು ಎಂದು ಕುಟುಕಿದೆ.









