Virat Kohli | ವಿಶ್ವಕಪ್ ಗೆ ವಿರಾಟ್ ತಯಾರಿ..!! vikram-rathor-Reaction-on-virat-kohli-batting saaksha tv
ಕೋಲ್ಕತ್ತಾ : ವಿಶ್ವ ಕ್ರಿಕೆಟ್ ನ ಬ್ಯಾಟಿಂಗ್ ಸೂಪರ್ ಸ್ಟಾರ್, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೆಲ ದಿನಗಳಿಂದ ತಮ್ಮ ಸ್ಥಾನಕ್ಕೆ ತಕ್ಕಂತೆ ಆಟವಾಡುತ್ತಿಲ್ಲ.
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಸೆಂಚೂರಿ ಬಾರಿಸಿ ಎರಡು ವರ್ಷಗಳೇ ಕಳೆದಿದೆ.
ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸಿರೀಸ್ ನಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಆದ್ರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ನನಗೆ ಯಾವುದೇ ಆಂದೋಳನವಿಲ್ಲ.
ಅತಿ ಶೀಘ್ರದಲ್ಲಿಯೇ ಭಾರತದ ಉತ್ತಮ ಇನ್ನಿಂಗ್ಸ್ ಆಡಲಿದ್ದಾರೆ ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಫಾರ್ಮ್ ನಲ್ಲಿಲ್ಲ ಅನ್ನೋದು ನಾನು ಒಪ್ಪುವುದಿಲ್ಲ. ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ವಿಫಲವಾಗಿದ್ದು, ದೊಡ್ಡ ವಿಷಯವೇನಲ್ಲ.
ನೆಟ್ಸ್ ನಲ್ಲಿ ಅವರು ಯಾವುದೇ ಹಿಂಜರಿಕೆ ಇಲ್ಲದೇ ಬ್ಯಾಟ್ ಬೀಸುತ್ತಿದ್ದಾರೆ. ಅವರ ತಯಾರಿ ಕೂಡ ಚೆನ್ನಾಗಿದೆ.
ಶೀಘ್ರದಲ್ಲಿಯೇ ಒಂದೊಳ್ಳೆ ಇನ್ನಿಂಗ್ಸ್ ನೊಂದಿಗೆ ತಾನೇನು ಎಂದು ವಿರಾಟ್ ಕೊಹ್ಲಿ ನಿರೂಪಿಸುತ್ತಾರೆ ಎಂದು ರಾಥೋಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಆಸ್ಟ್ರೇಲಿಯಾದಲ್ಲಿ ಈ ವರ್ಷ ನಡೆಯಲಿರುವ ಟಿ 20 ವಿಶ್ವಕಪ್ ಗೆ ವಿರಾಟ್ ಕೊಹ್ಲಿ ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿಸಿದರು.









