IND VS WI | ವೆಂಕಿ ಹುಷಾರಾಗಿ ಆಟವಾಡು..ಮ್ಯಾಚ್ ಗೆಲ್ಲಲೇಬೇಕು
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ–20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಸೂರ್ಯಕುಮಾರ್ ಯಾದವ್ ಮತ್ತು ವೆಂಕಟೇಶ್ ಅಯ್ಯರ್ ಕ್ರೀಸ್ ಗೆ ಕಚ್ಚಿ ನಿಂತು ಟೀಂ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದರು.
158 ರನ್ ಗಳ ಗುರಿಯೊಂದಿಗೆ ಅಖಾಡಕ್ಕೆ ಬಂದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ (40) ರನ್ ಮತ್ತು ಇಶಾನ್ ಕಿಶಾನ್ ( 35) ರನ್ ಗಳೊಂದಿಗೆ ಉತ್ತಮ ಆರಂಭ ತಂದುಕೊಟ್ಟರು.
ವಿರಾಟ್ ಕೊಹ್ಲಿ 17 ರನ್ ಗಳಿಸಿ ಔಟ್ ಆದರು. ನಂತರ ಕ್ರೀಸ್ ಗೆ ಬಂದ ಸೂರ್ಯಕುಮಾರ್ ಯಾದವ್, ಕೀಪರ್ ಪಂತ್ ಜೊತೆಗೂಡಿ ಇನ್ನಿಂಗ್ಸ್ ಮುನ್ನಡೆಸಲು ಬಯಸಿದ್ದರು.
ಆದರೆ ಪಂತ್ ಅಜಾಗರೂಕತೆಯಿಂದ ವಿಕೆಟ್ ಬೀಳುತ್ತಿದ್ದಂತೆ ಟೀಂ ಇಂಡಿಯಾ ನಾಲ್ಕು ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಯುವ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಕ್ರೀಸ್ ಗೆ ಬಂದರು. ತಕ್ಷಣ ಸೂರ್ಯಕುಮಾರ್ .. ಅಯ್ಯರ್ ಜೊತೆ .. ವೆಂಕಿ ನಾವು ಮ್ಯಾಚ್ ಗೆಲ್ಲಲೇಬೇಕು ..
ಹುಷಾರಾಗಿ ಆಟವಾಡು ಎಂದು ಹೇಳುವುದು ಸ್ಟಂಪ್ ಮೈಕ್ ನಲ್ಲಿ ದಾಖಲಾಗಿದೆ. ಸೂರ್ಯ ಕುಮಾರ್ ಯಾದವ್ ಮಾತಿಗೆ ಓಕೆ ಎಂದ ವೆಂಕಟೇಶ್ ಅಯ್ಯರ್ ಎಚ್ಚರಿಕೆಯಿಂದ ಇನ್ನಿಂಗ್ಸ್ ಕೊಟ್ಟಿದರು.
ಈ ಪಂದ್ಯದಲ್ಲಿ ಅಯ್ಯರ್ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 24 ರನ್ ಗಳಿಸಿ ಅಜೇಯರಾಗುಳಿದರು. ಸೂರ್ಯಕುಮಾರ್ (18 ಎಸೆತಗಳಲ್ಲಿ 5 ಬೌಂಡರಿ, ಒಂದು ಸಿಕ್ಸರ್‌ಗೆ ಔಟಾಗದೆ 34) ನಿರ್ಣಾಯಕ ಇನಿಂಗ್ಸ್ ಆಡಿದರು.
ಇದರೊಂದಿಗೆ ಮೂರು ಮ್ಯಾಚ್ ಗಳ ಸರಣಿಯಲ್ಲಿ 1-0 ಅಂತರದೊಂದಿಗೆ ಮುನ್ನಡೆ ಸಾಧಿಸಿದೆ.









