Bagalakote | ಮಾಜಿ ಶಾಸಕ ಜಿ.ವಿ.ಮಂಟೂರ ವಿಧಿವಶ
ಬಾಗಲಕೋಟೆ : ಮಾಜಿ ಶಾಸಕ ಜಿ.ವಿ.ಮಂಟೂರ ಅವರು ವಿಧಿವಶರಾಗಿದ್ದಾರೆ.
ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಮಂಟೂರ ಅವರು ಕೊನೆಯುಸಿರೆಳೆದಿದ್ದು, ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಮಂಟೂರವರು ಬಾಗಲಕೋಟೆ ಕ್ಷೇತ್ರದಲ್ಲಿ ಎರಡು ಸಲ ಶಾಸಕರಾಗಿದ್ದರು.
1983ರಲ್ಲಿ ಪಕ್ಷೇತರರಾಗಿ ಹಾಗೂ 1985 ರಲ್ಲಿ ಜನತಾ ಪಕ್ಷದಿಂದ ಗೆದ್ದು ಶಾಸಕರಾಗಿದ್ದರು.
ಮಂಟೂರ ಅವರು ಮಾಜಿ ಸಿಎಂ ರಾಮಕೃಷ್ಟ ಹೆಗಡೆ ಅವರ ಕBagalakote former-mla-gv-mantura no moreಟ್ಟಾ ಅನುಯಾಯಿಯಾಗಿದ್ದರು.
ಮಂಟೂರ ಅವರು ಇಂದು ಮೂವರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ.
ಹಿರಿಯ ನಾಯಕರ ಅಗಲಿಕೆಗೆ ರಾಜ್ಯ ಗಣ್ಯರು ಸಂತಾಪ ಸೂಚಿಸಿದ್ದಾರೆ.









