Rohit Sharma | ಇದು ದುರಂಹಕಾರವೋ.. ಹಿಟ್ ಮ್ಯಾನ್ ಕೋಪವೋ..? Rohit-sharma-kicks-ball-bhuvneshwar saaksha tv
ರೋಹಿತ್ ಶರ್ಮಾ.. ಟೀಂ ಇಂಡಿಯಾದ ನಾಯಕರಾದ ಬಳಿಕ ತಂಡ ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿದೆ. ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧಧ ಟಿ 20 ಮತ್ತು ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಸರಣಿಯನ್ನು ಭಾರತ ತಂಡ ಗೆದ್ದು ಬೀಗಿದೆ. ಇನ್ನು ವಿಂಡೀಸ್ ವಿರುದ್ಧ ಟಿ 20 ಸರಣಿಯನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ವಶಪಡಿಸಿಕೊಂಡಿದ್ದಾರೆ.
ಅಂದಹಾಗೆ ರೋಹಿತ್ ಶರ್ಮಾ ಅವರನ್ನ ಎಲ್ಲರೂ ಶಾಂತಿ ಸ್ವಭಾವದವರು. ಮೈದಾನದಲ್ಲಿ ಧೋನಿಯಂತೇ ಕಾಮ್ ಅಂಡ್ ಕೂಲ್ ಆಗಿರ್ತಾರೆ ಅಂತಾ ಹೇಳಲಾಗುತ್ತಿತ್ತು. ಆದ್ರೆ ಟೀಂ ಇಂಡಿಯಾದ ನಾಯಕರಾದ ಬಳಿಕ ರೋಹಿತ್ ಶರ್ಮಾ ಕಂಪ್ಲೀಟ್ ಬದಲಾದಂತೆ ಕಾಣುತ್ತಿದೆ. ಯಾಕಂದರೆ ರೋಹಿತ್ ಶರ್ಮಾ ಮೈದಾನದಲ್ಲಿ ವಿರಾಟ್ ಕೊಹ್ಲಿಯಂತೆ ಅಗ್ರೆಸ್ಸಿವ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಆಟಗಾರರ ಸಣ್ಣ ಸಣ್ಣ ತಪ್ಪುಗಳನ್ನೂ ಸಹಿಸಿಕೊಳ್ಳುತ್ತಿಲ್ಲ. ಆಟಗಾರರ ಸಣ್ಣ ತಪ್ಪುಗಳನ್ನ ಸಹಿಸದೇ ಮೈದಾನದಲ್ಲಿಯೇ ರಿಯಾಕ್ಟ್ ಆಗುತ್ತಿದ್ದಾರೆ. ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಚಹಾಲ್ ವಿರುದ್ಧ ಗರಂ ಆಗಿದ್ದ ರೋಹಿತ್. ಶುಕ್ರವಾರ ನಡೆದ 2 ಟಿ 20 ಪಂದ್ಯದಲ್ಲಿ ವೇಗಿ ಭುವನೇಶ್ವರ್ ಕುಮಾರ್ ಮೇಲೆ ಅಸಹನೆ ಹೊರಹಾಕಿದ್ದಾರೆ.
ಈ ಪಂದ್ಯದಲ್ಲಿ ವಿಂಡೀಸ್ ಬ್ಯಾಟ್ಸ್ ಮನ್ ಗಳಾದ ನಿಕೋಲಸ್ ಪೂರನ್ ಹಾಗೂ ಪೊವೆಲ್ ಅದ್ಭುತ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ಆಸರೆಯಾಗಿದ್ದರು. ಈ ಕ್ರಮದಲ್ಲಿ 15ನೇ ಓವರ್ ಬೌಲ್ ಮಾಡಿದ ಭುವಿ… ಪೊವೆಲ್ ನೀಡಿದ ಕ್ಯಾಚ್ ಕೈಬಿಟ್ಟರು. ಇದರಿಂದ ಕೋಪಗೊಂಡ ರೋಹಿತ್ ಶರ್ಮಾ ಸಿಟ್ಟಿನಿಂದ ಚೆಂಡನ್ನು ಒದ್ದು ಅಸಹನೆ ತೋರಿದರು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
https://twitter.com/addicric/status/1494718969705480194?ref_src=twsrc%5Etfw%7Ctwcamp%5Etweetembed%7Ctwterm%5E1494718969705480194%7Ctwgr%5E%7Ctwcon%5Es1_c10&ref_url=https%3A%2F%2Fwww.sakshi.com%2Ftelugu-news%2Fsports%2Find-vs-wi-2nd-t20-rohit-sharma-kicks-ball-after-bhuvneshwar-drops-catch-1435712
ಈ ಹಿನ್ನಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ರೋಹಿತ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದಾರೆ”ರೋಹಿತ್ ಯಾಕಿಷ್ಟು ಕೋಪ.. ಇದು ದುರಂಹಕಾರವೋ…? ಕೋಪವೋ…? ಅಂತಾ ಪ್ರಶ್ನೆ ಮಾಡುತ್ತಿದ್ದಾರೆ.









