Prasidh Krishna : ಧೂಳೆಬ್ಬಿಸಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ..! prasidh-krishna-terrific-bowling
ರಣಜಿ ಟ್ರೋಫಿಯಲ್ಲಿ ಜಮ್ಮುಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಧೂಳೆಬ್ಬಿಸಿದ್ದಾರೆ.
ಈ ಪಂದ್ಯದಲ್ಲಿ 12 ಓವರ್ ಗಳನ್ನು ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ 35 ರನ್ ಗಳನ್ನ ನೀಡಿ ಆರು ವಿಕೆಟ್ ಗಳನ್ನು ಪಡೆದರು.
ಪ್ರಸಿದ್ಧ್ ಕೃಷ್ಣ ದಾಳಿಗೆ ಜಮ್ಮು ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 93 ರನ್ ಗಳಿಗೆ ಆಲೌಟ್ ಆಗಿದೆ.
ಇತ್ತೀಚಿನ ದಿನಗಳಲ್ಲಿ, ಪ್ರಸಿದ್ಧ ಕೃಷ್ಣ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ODI ಸರಣಿಯಲ್ಲಿ ಪ್ರಸಿದ್ಧ್ ಒಂಬತ್ತು ವಿಕೆಟ್ ಪಡೆದು ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಅದರಲ್ಲೂ ವಿಂಡೀಸ್ ವಿರುದ್ದ ಎರಡನೇ ODI ನಲ್ಲಿ 9 ಓವರ್‌ಗಳಲ್ಲಿ 12 ರನ್‌ಗಳನ್ನು ನೀಡಿ, ಮೂರು ಮೇಡಿನ್ ಗಳೊಂದಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದು ಮಿಂಚಿದರು.
ಈ ಪ್ರದರ್ಶನದಿಂದಾ ಐಪಿಎಲ್ ಮೆಗಾ ಹರಾಜಿನಲ್ಲಿ, ಪ್ರಸಿದ್ಧ ಕೃಷ್ಣ ಅವರನ್ನು ರಾಜಸ್ಥಾನ್ ರಾಯಲ್ಸ್ ರೂ. 10 ಕೋಟಿಗೆ ಖರೀಸಿದೆ.
ಸದ್ಯ ಪ್ರಸಿದ್ಧ್ ಕೃಷ್ಣ ಪಾರ್ಮ್ ನೋಡಿದ್ರೆ ಐಪಿಎಲ್ ನಲ್ಲಿ ಮಿಂಚೋದು ಪಕ್ಕಾ ಆಗಿದೆ.









