Noel David : ದಯನೀಯ ಸ್ಥಿತಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟರ್
ಹೈದರಾಬಾದ್‌ನ ಆಲ್‌ರೌಂಡರ್, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ನೋಯೆಲ್ ಡೇವಿಡ್ ಅವರು ಕಿಡ್ನಿ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದು, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ, ಟೀಂ ಇಂಡಿಯಾದ ಮಾಜಿ ನಾಯಕ ಮೊಹ್ಮದ್ ಅಜರುದ್ದೀನ್ ಆಸ್ಪತ್ರೆಗೆ ಭೇಟಿ ನೀಡಿ ಡೇವಿಡ್ ಆರೋಗ್ಯ ವಿಚಾರಿಸಿದರು.
ಅಲ್ಲದೇ ನೋಯೆಲ್ ಅವರ ಕಿಡ್ನಿ ಆಪರೇಷನ್ ಗೆ ಆಗುವ ಖರ್ಚುಗಳನ್ನು ಹೆಚ್ ಸಿಎ ಭರಿಸಲಿದೆ ಎಂದು ಭರವಸೆ ನೀಡಿದರು.
ಅಲ್ಲದೆ ನೋಯೆಲ್ ಗೆ ವೈಯಕ್ತಿಕ ಆರ್ಥಿಕ ನೆರವು ನೀಡುವ ಭರವಸೆಯನ್ನೂ ಅಜರ್ ಇದೇ ವೇಳೆ ನೀಡಿದರು.
ಆಫ್ ಸ್ಲಿನ್ ಆಲ್ ರೌಂಡರ್ ಆಗಿದ್ದ ನೋಯೆಲ್, 1997 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ ಭಾರತ ತಂಡದ ಸದಸ್ಯರಾಗಿದ್ದರು.
1997ರಲ್ಲಿ ಟೀಂ ಇಂಡಿಯಾ ಪರ ನಾಲ್ಕು ಏಕದಿನ ಪಂದ್ಯಗಳನ್ನಾಡಿದ್ದರು. mohammad-azharuddin-assures-noel-david









