mexico: ಪಂದ್ಯದ ವೇಳೆ ಮಾರಾಮಾರಿ: 17 ಸಾವು, 50 ಗಾಯ!
ಉತ್ತರ ಅಮೆರಿಕಾ : ಫುಟ್ ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಗಲಾಟೆ ನಡೆದು 17 ಮಂದಿ ಮೃತಪಟ್ಟು, 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಅಮೆರಿಕಾದ ಮ್ಯಾಕ್ಸಿಕೋದಲ್ಲಿ ನಡೆದಿದೆ.
ಮ್ಯಾಕ್ಸಿಕೋದಲ್ಲಿ ಅಟ್ಲಾಸ್ ಹಾಗೂ ಕ್ವಾರಂಟೋರರೋ ನಡುವೆ ಫುಟ್ ಬಾಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಉಭಯ ತಂಡಗಳ ಅಭಿಮಾನಿಗಳ ನಡುವೆ ಜಗಳ ಶುರುವಾಗಿದೆ.
ಇದು ವಿಕೋಪಕ್ಕೆ ತಿರುಗಿ ಅಭಿಮಾನಿಗಳು ಮನಬಂದಂತೆ ಬಡಿದಾಡಿಕೊಂಡಿದ್ದಾರೆ.
ಪರಿಣಾಮ 17 ಮಂದಿ ಕೊನೆಯುಸಿರೆಳೆದಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ ಬಗ್ಗೆ ತನಿಖೆ ನಡೆಸೋದಾಗಿ ಅಲ್ಲಿನ ಅಸೋಷಿಯೇಷನ್ ಮಾಹಿತಿ ನೀಡಿದೆ. violence breaks out among fans during Mexico football match









