PAK vs AUS : ಏಕಕಾಲದಲ್ಲಿ ಕ್ರೀಸ್ ಗೆ ಬಂದ ಪತಿ-ಪತ್ನಿ
ಕ್ರಿಕೆಟ್ ನಲ್ಲಿ ಆಗಾಗ ಕೆಲವು ಅಪರೂಪ ಘಟನೆಗಳು ನಡೆಯುತ್ತವೆ.
ನಿಜ ಜೀವನದಲ್ಲಿ ಗಂಡ ಹೆಂಡತಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಅಲಿಸ್ಸಾ ಹ್ಯಾಲಿ ಒಂದೇ ತಂಡದ ವಿರುದ್ಧ ಏಕಕಾಲದಲ್ಲಿ ಬ್ಯಾಟಿಂಗ್ ಗೆ ಬಂದಿದ್ದಾರೆ.
ಆಸ್ಟ್ರೇಲಿಯಾವನ್ನು ಪ್ರತಿನಿಧಿಸುವ ಈ ಜೋಡಿ ಪ್ರೀತಿಸಿ ಮದುವೆಯಾದರು. ಸದ್ಯ ಮಿಚೆಲ್ ಸ್ಟಾರ್ಕ್ ಪಾಕಿಸ್ತಾನ ಪ್ರವಾಸದಲ್ಲಿದ್ದರೆ.. ಅಲಿಸ್ಸಾ ಹ್ಯಾಲಿ ಏಕದಿನ ವಿಶ್ವಕಪ್‌ನಲ್ಲಿ ಬ್ಯುಸಿಯಾಗಿದ್ದಾರೆ.
ವಿಶ್ವಕಪ್‌ನ ಅಂಗವಾಗಿ ಮೌಂಟ್ ಮಂಗನುಯಿಯಲ್ಲಿ ಆಸ್ಟ್ರೇಲಿಯನ್ ಮಹಿಳಾ ತಂಡ, ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಪಂದ್ಯ ಆಡಿದೆ.
ಈ ಪಂದ್ಯದಲ್ಲಿ ಅಲಿಸ್ಸಾ ಹ್ಯಾಲೆ ಆರಂಭಿಕರಾಗಿ ಧೂಳೆಬ್ಬಿಸಿದರು. ಅಲಿಸ್ಸಾ ಹ್ಯಾಲಿ 72 ರನ್ ಗಳಿಸಿ ನಿರ್ಣಾಯಕ ಇನಿಂಗ್ಸ್ ಆಡಿ ಪಂದ್ಯದ ಗೆಲುವಿಗೆ ಕಾರಣರಾದರು.
ಏತನ್ಮಧ್ಯೆ, ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ನ ಅಂತಿಮ ದಿನದಂದು ಮಿಚೆಲ್ ಸ್ಟಾರ್ಕ್ ಎಂಟನೇ ಶ್ರೇಯಾಂಕದ ಬ್ಯಾಟ್ಸ್‌ಮನ್ ಆಗಿ ಕ್ರೀಸ್ ಗೆ ಬಂದಿದ್ದಾರೆ.
ಇನ್ನೇನಿದೆ ಅತ್ತ ಹೆಂಡತಿ.. ಇತ್ತ ಗಂಡ ಬೇರೆ ಬೇರೆ ಕಡೆ ಒಂದೇ ಸಮಯದಲ್ಲಿ ಕ್ರೀಸ್ ಗೆ ಬಂದಿದ್ದಾರೆ.
ಈ ಫೋಟೋಗಳನ್ನು ಇಬ್ಬರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
pak-vs-aus-mitchell-starc-alyssa-healy-bat-simultaneous









