Jhulan goswami | ಇತಿಹಾಸ ಬರೆದ ಜೂಲನ್ ಗೋಸ್ವಾಮಿ…!
ಟೀಂ ಇಂಡಿಯಾದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಚಕ್ಡಾ ಎಕ್ಸ್‌ಪ್ರೆಸ್ ಎಂದು ಜನಪ್ರಿಯವಾಗಿರುವ 39 ವರ್ಷದ ಜೂಲನ್ ಏಕದಿನ ವಿಶ್ವಕಪ್‌ನಲ್ಲಿ 39 ವಿಕೆಟ್‌ಗಳನ್ನು ಪಡೆದಿದ್ದಾರೆ.
ಆ ಮೂಲಕ ಆಸ್ಟ್ರೇಲಿಯಾದ ಬೌಲರ್ ಲಿನ್ ಫುಲ್‌ಸ್ಟನ್ ಅವರ ದಾಖಲೆಯನ್ನು ಸರಿಗಟ್ಟಿ, ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಜೂಲನ್ 9 ಓವರ್ ಬೌಲ್ ಮಾಡಿ 41 ರನ್ ನೀಡಿ ಕೇಟಿ ಮರ್ಟಿನ್ ವಿಕೆಟ್ ಪಡೆದರು.
ಆ ಮೂಲಕ ವಿಶ್ವಕಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿಗೆ ಸೇರಿಕೊಂಡರು.
ಇಲ್ಲಿಯವರೆಗೆ, ಈ ಬಂಗಾಳದ ವೇಗದ ಬೌಲರ್ 12 ಟೆಸ್ಟ್‌ಗಳಲ್ಲಿ 44 ವಿಕೆಟ್‌ಗಳನ್ನು, 197 ಏಕದಿನ ಪಂದ್ಯಗಳಲ್ಲಿ 248 ವಿಕೆಟ್‌ಗಳನ್ನು ಮತ್ತು 68 T20 ಪಂದ್ಯಗಳಲ್ಲಿ 56 ವಿಕೆಟ್‌ಗಳನ್ನು ಪಡೆದಿದ್ದಾರೆ.
jhulan-goswami-world-record









