Shivamogga | ಮಗನಿಗಾಗಿ ಮತ್ತೆ ಜೊತೆಯಾದ ತಂದೆ-ತಾಯಿ
ಮಗನಿಗಾಗಿ ಮತ್ತೆ ಜೊತೆಯಾದ ತಂದೆ-ತಾಯಿ
ದೂರವಾಗಿದ್ದ ಶಿವಮೊಗ್ಗ ಜಿಲ್ಲೆಯ ಕಡೆಗದ್ದೆಯ ದಂಪತಿ
ಲೋಕ್ ಅದಾಲತ್ ಹಾರ ಬದಲಿಸಿಕೊಂಡ ದಂಪತಿ
ಡಿವೋರ್ಸ್ ಗೆ ಮುಂದಾಗಿದ್ದ ಗಣೇಶಮೂರ್ತಿ & ಪೂರ್ಣಿಮಾ
ಶಿವಮೊಗ್ಗ : ಡಿವೈರ್ಸ್ ಪಡೆಯಲು ಮುಂದಾಗಿದ್ದ ತಂದೆ ಮತ್ತು ತಾಯಿಯನ್ನು ಅವರ 10ನೇ ತರಗತಿಯ ಮಗ ಒಂದು ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗೆ ಜಿಲ್ಲೆಯ ಕಡೆಗದ್ದೆಯ ನಿವಾಸಿಗಳಾದ ಗಣೇಶಮೂರ್ತಿ ಮತ್ತು ಪೂರ್ಣಿಮಾ ದಂಪತಿ 17 ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ್ದರು.
ಸಣ್ಣದಾದ ಮನಸ್ತಾಪದಿಂದಾಗಿ ಮೂರು ವರ್ಷದ ಹಿಂದೆ ತವರು ಸೇರಿದ್ದ ಪೂರ್ಣಿಮಾ ಮರಳಿ ಗಂಡನ ಮನೆಗೆ ಬಂದಿರಲಿಲ್ಲ.
ಕಳೆದ ಮೂರು ವರ್ಷಗಳಿಂದ ದೂರ ಇದ್ದ ದಂಪತಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇತ್ತ ಬಾಲಕ ಸುಹಾನ್, ಇದಕ್ಕೆ ವಿರೋಧ ವ್ಯಕ್ತಪಡಿಸಿ, ತಾಯಿ ಇದ್ದರೂ ಅನಾಥ ಮಗುವಿನಂತೆ ಇದ್ದೇನೆ ಎಂದು ತಮ್ಮ ವಕೀಲ ವಾಲೆಮನೆ ಶಿವಕುಮಾರ್ ಮುಂದೆ ಹೇಳಿದ್ದನು.
ಇತ್ತ ಶನಿವಾರ ನಗರದ ಹೊಸನಗರದ ಜೆಎಂಎಸ್ ಪಿ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗಿದೆ.
ಇಲ್ಲಿ ಗಣೇಶಮೂರ್ತಿ ಮತ್ತು ಪೂರ್ಣಿಮಾ ಮತ್ತೆ ಒಂದಾಗಿದ್ದಾರೆ. ನ್ಯಾಯಾಧೀಶರಾದ ಶ್ರೀಮತಿ ಪುಷ್ಪಲತಾ ಹಾಗೂ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ರವಿಕುಮಾರ್ ಅವರ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡಿದ್ದಾರೆ.
ಅಂದಹಾಗೆ ಏನಿದು ಲೋಕ್ ಅದಾಲತ್ ಎಂದರೇ ಜನತೆಯ ನ್ಯಾಯಾಲಯ ಎಂದು ಅರ್ಥ.
ಕುಟುಂಬಗಳಲ್ಲಿ ಸಮಸ್ಯೆ, ಇನ್ನಿತರ ವ್ಯಾಜ್ಯಗಳನ್ನು ಗ್ರಾಮಸ್ಥರೇ ಒಂದೆಡೆ ಸೇರಿ ಬಗೆಹರಿಸಿಕೊಳ್ಳುವಂತೆ ಲೋಕ್ ಅದಾಲತ್ ನಡೆಯುತ್ತದೆ.
ಇಲ್ಲಿ ಏನೇ ಮನಸ್ತಾಪ, ಜಗಳಗಳಿದ್ರೆ ಮೊದಲು ರಾಜೀ ಮಾಡಲು ಪ್ರಯತ್ನಿಸಲಾಗುತ್ತದೆ. shivamogga-HOSANAGAR COUPLES REUNITED IN LOK ADALAT









