ನಟ ಅಜಿತ್ ಪರ ನಿರ್ಮಾಪಕ ಆರ್.ಕೆ.ಸುರೇಶ್ ಬ್ಯಾಟಿಂಗ್
ಭಾನುವಾರ ಚೆನ್ನೈನಲ್ಲಿ ಮಾಯನ್ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕ ಆರ್ ಕೆ ಸುರೇಶ್ ಅವರು ನಟ ಅಜಿತ್ ಪರ ಬ್ಯಾಟ್ ಬೀಡಿದ್ದಾರೆ.
ವಲಿಮೈ ಸಿನಿಮಾ ಬಗ್ಗೆ ಬಂದ ಟೀಕೆಗಳನ್ನ ಬಗ್ಗೆ ಮಾತನಾಡಿದ ಸುರೇಶ್, ತಮಿಳು ಚಿತ್ರರಂಗದಲ್ಲಿರುವವರೇ ಇಲ್ಲಿರುವವರನ್ನು ಟೀಕಿಸುತ್ತಿದ್ದಾರೆ.
ಅಜಿತ್ ನಟಿಸಿದ ವಲಿಮೈ ಸಿನಿಮಾ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ತಪ್ಪುಗಳನ್ನ ಎತ್ತಿ ತೋರಿಸುತ್ತಿದ್ದಾರೆ.ಆದ್ರೆ ನಟ ಅಜಿತ್ ಬಗ್ಗೆ ಮಾತಾಡೋ ಅರ್ಹತೆ ಯಾರಿಗೂ ಇಲ್ಲ ಎಂದರು.
ಸೋಷಿಯೋ ಫ್ಯಾಂಟಸಿ ಸ್ಟೋರಿಯಾಗಿ ತಯಾರಾಗಿರುವ ಮಾಯನ್ ಚಿತ್ರವನ್ನು ನೋಡಿ ರಾಜಮೌಳಿ ಸಿನಿಮಾ ನಿರ್ದೇಶಕ ರಾಜೇಶ್ ಅವರನ್ನು ಅಭಿನಂದಿಸಿದ್ದಾರೆ.
ಈ ಸಿನಿಮಾವನ್ನು ತಮಿಳುನಾಡಿನ ಮಲೇಷಿಯಾದ ದತ್ ಅವರೊಂದಿಗೆ ಗಣೇಶ್ ನಿರ್ಮಿಸಿದ್ದು, ರಾಜೇಶ್ ನಿರ್ದೇಶಿಸಿದ್ದಾರೆ.
ವಿನೋದ್ ಮೋಹನ್, ಬಿಂದು ಮಾಧವಿ ಮತ್ತು ಪ್ರಿಯಾ ನಾಯಕಿಯರಾಗಿ ನಟಿಸಿರುವ ಈ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ.
ajith-kumar valimai film R K Suresh









