IPL ನಲ್ಲಿ ಅವಮಾನ.. ವಿದೇಶಿ ಲೀಗ್ ಗಳತ್ತ ಭಾರತೀಯ ಆಟಗಾರರು
2022 ರ ಐಪಿಎಲ್ ಮೆಗಾ-ಹರಾಜಿನಲ್ಲಿ ಮಾರಾಟವಾಗದೇ ನಿರಾಶೆಗೊಂಡ ಭಾರತೀಯ ಕ್ರಿಕೆಟಿಗರು ಕ್ಯಾಶ್ ರಿಚ್ ಲೀಗ್ ನಡೆಯುವ ಎರಡು ತಿಂಗಳ ಅವಧಿಯನ್ನು ವ್ಯರ್ಥ ಮಾಡದೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ.
ಹರಾಜಿನಲ್ಲಿ ಸೇಲ್ ಆಗದ ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡಲಿದ್ದಾರೆ.
ಮತ್ತೊಬ್ಬ ಟೆಸ್ಟ್ ಸ್ಪೆಷಲಿಸ್ಟ್ ಹನುಮ ವಿಹಾರಿ ಢಾಕಾ ಪ್ರಿಮಿಯರ್ ಲೀಗ್ ನಲ್ಲಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.
ಡಿಪಿಎಲ್ ನಲ್ಲಿ ಒಟ್ಟು ಏಳು ಭಾರತೀಯ ಆಟಗಾರರು (ವಿಹಾರಿ ಸೇರಿದಂತೆ) (ಅಭಿಮನ್ಯು ಈಶ್ವರನ್, ಪರ್ವೇಜ್ ರಸೂಲ್, ಬಾಬಾ ಅಪರಾಜಿತ್, ಅಶೋಕ್ ಮೆನಾರಿಯಾ, ಚಿರಾಗ್ ಜಾನಿ, ಗುರಿಂದರ್ ಸಿಂಗ್) ವಿವಿಧ ತಂಡಗಳನ್ನು ಪ್ರತಿನಿಧಿಸಲಿದ್ದಾರೆ.
ವಾಸ್ತವವಾಗಿ ಭಾರತೀಯ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ.
ಆದಾಗ್ಯೂ, ಡಿಪಿಎಲ್ ಬಾಂಗ್ಲಾದೇಶದ ಲೀಸ್ಟ್ ಎ ಕ್ರಿಕೆಟ್ ಆಗಿರುವುದರಿಂದ ಭಾರತೀಯ ಆಟಗಾರರಿಗೆ ಅವಕಾಶ ಸಿಕ್ಕಿದೆ. ಡಿಪಿಎಲ್ ನಲ್ಲಿ ಭಾರತೀಯ ಕ್ರಿಕೆಟಿಗರು ಭಾಗವಹಿಸುವುದು ಹೊಸದೇನಲ್ಲ.
ಕೋವಿಡ್ ಗೂ ಮುಂಚೆ, ವಿಹಾರಿ, ಈಶ್ವರನ್, ಅಪರಾಜಿತ್, ಮೆನಾರಿಯಾ ಅವರು ಡಿಪಿಎಲ್ ನಲ್ಲಿ ಭಾಗವಹಿಸೋದಕ್ಕು ಮೊದಲು ದಿನೇಶ್ ಕಾರ್ತಿಕ್, ಮನೋಜ್ ತಿವಾರಿ ಮತ್ತು ಯೂಸುಫ್ ಪಠಾಣ್ ಅವರಂತಹ ಟೀಮ್ ಇಂಡಿಯಾ ಸ್ಟಾರ್‌ಗಳು ವಿವಿಧ ಸೀಸನ್‌ಗಳಲ್ಲಿ ಬಾಂಗ್ಲಾದೇಶ ಲಿಸ್ಟ್ ಎ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಈ ಋತುವಿನಲ್ಲಿ ಭಾರತದ ಆಟಗಾರರಲ್ಲದೆ, ಪಾಕಿಸ್ತಾನ ಮತ್ತು ಜಿಂಬಾಬ್ವೆಯ ಅನೇಕ ಆಟಗಾರರು ಸಹ ಭಾಗವಹಿಸುತ್ತಿದ್ದಾರೆ.
ಇವರಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಹನುಮ ವಿಹಾರಿ, ಪಾಕಿಸ್ತಾನದ ಅನುಭವಿ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಮತ್ತು ಜಿಂಬಾಬ್ವೆ ಆಟಗಾರ ಸಿಕಂದರ್ ರಜಾ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.
hanuma-vihari-play-dhaka-premier-league









