ಕಲಾವಿದೆ ಮೇಲೆ ಆಸಿಡ್ ದಾಳಿ!
ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಘಟನೆ
ಆ್ಯಸಿಡ್ ದಾಳಿಗೆ ಒಳಗಾದ ಕಲಾವಿದೆ ದೇವಿ
ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದ ದೇವಿ
ಮಾರ್ಚ್ 18 ರಂದು ರಾತ್ರಿ ನಡೆದ ಘಟನೆ
ರಮೇಶ್, ಸ್ವಾತಿ, ಯೋಗೇಶ್ ಆರೋಪಿಗಳು
ಬೆಂಗಳೂರು : ಮನೆಯ ಜಗಲಿಯ ಮೇಲೆ ಮಲಗಿದ್ದ ಮಹಿಳೆ ಮೇಲೆ ಕಿಡಿಗೇಡಿಗಳು ಆಸಿಡ್ ದಾಳಿ ನಡೆಸಿರುವ ಘಟನೆ ಬೆಂಗಳೂರು ನಗರದ ನಂದಿನಿ ಲೇಔಟ್ ನಲ್ಲಿ ನಡೆದಿದೆ.
ರಂಗಭೂಮಿ ಕಲಾವಿದೆ ದೇವಿ ಆಸಿಡ್ ದಾಳಿಯಿಂದ ಗಾಯಗೊಂಡವರಾಗಿದ್ದಾರೆ. ಇವರು ಈ ಹಿಂದೆ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಅನಾರೋಗ್ಯದಿಂದಾಗಿ ಬಿಎಂಟಿಸಿ ನಿರ್ವಾಹಕಿ ಹುದ್ದೆಯನ್ನ ತೊರೆದಿದ್ದರು. ಆದ್ರೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.
ಈ ನಡುವೆ ಮಾರ್ಚ್ 18 ರಂದು ಮನೆಯ ಜಗಲಿಯ ಮೇಲೆ ದೇವಿ ಮಲಗಿದ್ದಾಗ ಅವರ ರಂಗಭೂಮಿ ಸಹಪಾಠಿಗಳು ಆಸಿಡ್ ದಾಳಿ ನಡೆಸಿದ್ದಾರೆ.
ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಾ ರಮೇಶ್, ಸ್ವಾತಿ, ಯೋಗೇಶ್ ಎಂಬುವವರನ್ನು ಬಂಧಿಸಿದ್ದಾರೆ.
ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.acid attack on lady in Bengaluru









