Nani Wishes Sundar : ವಾಷಿಂಗ್ ಟನ್ ಸುಂದರ್ ಗೆ ನಟ ನಾನಿ ವಿಶ್..!!
ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಎಲ್ಲಾ ತಂಡಗಳ ಆಟಗಾರರು ನೆಟ್ಸ್ ಗಳಲ್ಲಿ ಅಭ್ಯಾಸ ಶುರು ಮಾಡಿದ್ದಾರೆ.
ಇತ್ತ ಫ್ರಾಂಚೈಸಿಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರವನ್ನೂ ಕೂಡ ನಡೆಸುತ್ತಿವೆ. ಅದರಂತೆ ಸನ್ ರೈಸರ್ಸ್ ಹೈದರಾಬಾದ್ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ.
ಇಚ್ಚೀಚೆಗೆ SRH ಟ್ವಿಟರ್ನಲ್ಲಿ ಖ್ಯಾತ ಟಾಲಿವುಡ್ ಹೀರೋ, ನ್ಯಾಚುರಲ್ ಸ್ಟಾರ್ ನಾನಿ ಅವರನ್ನು ತಮ್ಮ ತಂಡದ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ಗೆ ಲಿಂಕ್ ಮಾಡಿ ಪೋಸ್ಟ್ ಮಾಡಿದೆ.
ನಾನಿ ನಾಯಕನಾಗಿ ನಟಿಸಿರುವ ‘ಅಂತೆ ಸುಂದರಾನಿಕಿ’ ಸಿನಿಮಾ ಜೂನ್ 10ಕ್ಕೆ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ ಬೆನ್ನಲ್ಲೇ, ‘ಆ ಸುಂದರಂ ಜೂನ್ ನಲ್ಲಿ ಬರುತ್ತಾನ ಈ ಸುಂದರ್ ಟ್ರೈನಿಂಗ್ ಸ್ಟಾರ್ಟ್ ಮಾಡಿದ್ದಾನೆ..’ ಎಂದು ಸನ್ ರೈಸ್ ಟ್ವೀಟ್ ಮಾಡಿದೆ.
ಇದಕ್ಕೆ ನ್ಯಾಚುರಲ್ ಸ್ಟಾರ್ ನಾನಿ ಪ್ರತಿಕ್ರಿಯಿಸಿದ್ದಾರೆ. ‘ಆಲ್ ದಿ ಬೆಸ್ಟ್ ಸುಂದರ್, ಫ್ರಂ ಸುಂದರ್..’ ಎಂದು ಟ್ವೀಟ್ ಮಾಡಿದ್ದಾರೆ.
ವಾಷಿಂಗ್ಟನ್ ಸುಂದರ್ ಕೂಡ ಟ್ವೀಟ್ಗೆ ಪ್ರತಿಕ್ರಿಯಿಸಿ, ” ಬಂದೆ ಗಾಯ್ಸ್ ಎಂದು ಟ್ವೀಟ್ ಮಾಡಿದ್ದಾರೆ. ಏತನ್ಮಧ್ಯೆ, ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಮೆಗಾ ಹರಾಜಿನಲ್ಲಿ ಸನ್ರೈಸರ್ಸ್ ವಾಷಿಂಗ್ಟನ್ ಸುಂದರ್ ಅವರನ್ನು 8.75 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.IPL 2022 Nani Wishes Sundar