Ross Taylor Retirement | ರಾಸ್ ಟೈಲರ್ ಯುಗಾಂತ್ಯ..!!
ನ್ಯೂಜಿಲೆಂಡ್ ಕ್ರಿಕೆಟ್‌ನಲ್ಲಿ ಒಂದು ಯುಗ ಮುಗಿದಿದೆ. ಸುಮಾರು ಎರಡು ದಶಕಗಳ ಕಾಲ ತಂಡಕ್ಕೆ ಸೇವೆ ಸಲ್ಲಿಸಿದ ಸ್ಟಾರ್ ಆಟಗಾರ ರಾಸ್ ಟೇಲರ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ನೆದರ್ಲೆಂಡ್ಸ್ ವಿರುದ್ಧದ ಮೂರನೇ ODIನಲ್ಲಿ 16 ಎಸೆತಗಳಲ್ಲಿ ಒಂದು ಸಿಕ್ಸರ್ನೊಂದಿಗೆ 14 ರನ್ ಗಳಿಸಿದ ರೋಸ್ಕೋ (ರಾಸ್ ಟೇಲರ್ ಅಡ್ಡಹೆಸರು), ತಮ್ಮ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು.
ಅಂತಿಮ ಇನ್ನಿಂಗ್ಸ್ ಆಡಲು ರಿಂಗ್ ಪ್ರವೇಶಿಸಿದ ಟೇಲರ್ ಅವರಿಗೆ ನೆದರ್ಲ್ಯಾಂಡ್ ಆಟಗಾರರು ‘ಗಾರ್ಡ್ ಆಫ್ ಆನರ್‘ ನೀಡಿದರು. ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವ ವೇಳೆ ಟೇಲರ್ ಭಾವುಕರಾಗಿದ್ರು.
38 ವರ್ಷದ ರಾಸ್ ಟೇಲರ್ ಅವರು 2006 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಅವರು ನ್ಯೂಜಿಲೆಂಡ್ ಪರ 112 ಟೆಸ್ಟ್, 236 ODI ಮತ್ತು 102 T20I ಪಂದ್ಯಗಳನ್ನು ಆಡಿದ್ದಾರೆ.
ಟೇಲರ್ 3 ದ್ವಿಶತಕ, 19 ಶತಕ ಮತ್ತು 35 ಅರ್ಧಶತಕಗಳೊಂದಿಗೆ 44.16 ಸರಾಸರಿಯಲ್ಲಿ ಟೆಸ್ಟ್‌ನಲ್ಲಿ 7684 ರನ್ ಗಳಿಸಿದ್ದಾರೆ.
ಟಿ20ಯಲ್ಲಿ 7 ಅರ್ಧ ಶತಕಗಳೊಂದಿಗೆ 1909 ರನ್ ಗಳಿಸಿದ್ದಾರೆ.
ODI ಗಳಲ್ಲಿ, 47.52 ಸರಾಸರಿಯೊಂದಿಗೆ 21 ಶತಕ ಮತ್ತು 51 ಅರ್ಧ ಶತಕಗಳ ಸಹಾಯದಿಂದ 8602 ರನ್ ಗಳಿಸಿದ್ದಾರೆ. ross-taylor-retirement-emotional-goodbye









