RCB | ನಾವು ಫೈನಲ್ ಗೆ ಹೋಗೇ ಹೋಗ್ತೀವಿ..
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುತ್ತಿದೆ.
ಆಡಿರುವ ಮೂರೂ ಪಂದ್ಯಗಳಲ್ಲಿ ಆರ್ ಸಿಬಿ ಉತ್ತಮ ಪ್ರದರ್ಶನವನ್ನ ನೀಡಿದೆ.
ಪಂಜಾಬ್ ವಿರುದ್ಧ ಆರ್ ಸಿಬಿ ಪಂದ್ಯ ಸೋತರೂ ಕೊನೆ ಕ್ಷಣದವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಒಟ್ಟಾರೆ ಆರ್ ಸಿಬಿ ತಂಡ ಮ್ಯಾಕ್ಸ್ ವೆಲ್, ಹೆಂಜಲ್ ವುಡ್ ಹೊರತಾಗಿಯೂ ಸಾಂಘೀಕ ಪ್ರದರ್ಶನ ನೀಡುತ್ತಿದೆ.
ನಾವು ಮೊದಲೇ ಹೇಳಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈ ಬಾರಿ ಹೊಸ ಜೋಷ್ ಕಾಣಿಸುತ್ತಿದೆ.
ಬೆಂಗಳೂರು ತಂಡದಲ್ಲಿ ಈ ಮುಂಚೆಗಿಂತಲೂ ಹೆಚ್ಚಿನ ಒಗ್ಗಟ್ಟು ಕಾಣಿಸುತ್ತಿದೆ. ಸ್ಟಾರ್ಸ್, ಸೂಪರ್ ಸ್ಟಾರ್, ದೇಶಿಯ ಆಟಗಾರರು ಎಂಬ ಯಾವುದೇ ವ್ಯತ್ಯಾಸ ಇಲ್ಲದೇ ಗೆಲುವಿಗಾಗಿ ಶತ ಪ್ರಯತ್ನಗಳನ್ನ ಮಾಡುತ್ತಿದ್ದಾರೆ.
ತಂಡದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ರಾಯಲ್ ಚಾಲೆಂಜರ್ಸ್ ತಂಡದ ಲಯನ್ ಫಾಫ್ ಡುಪ್ಲಸಿ..!!
ಫಾಫ್ ಡುಪ್ಲಸಿ ಆರ್ ಸಿಬಿ ತಂಡದ ನಾಯಕರಾದ ಬಳಿಕ ತಂಡದಲ್ಲಿ ಪಾಸಿಟಿವ್ ವೈಬ್ರೆಷನ್ಸ್ ಹೆಚ್ಚಾಗಿವೆ. ಸೋತ ಪಂದ್ಯದಲ್ಲೂ ಧನಾತ್ಮಕ ಅಂಶಗಳನ್ನು ಹುಡುಕುವ ಡುಪ್ಲಸಿ, ಪಂದ್ಯ ಗೆದ್ದ ಬಳಿಕ ತಂಡದ ಜೊತೆಗೆ ಕೂಡಿ ಹಾಡು ಹಾಡಿ ಸೆಲೆಬ್ರೇಟ್ ಮಾಡ್ತಿದ್ದಾರೆ.
ಅದರಂತೆ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ದದ ಪಂದ್ಯದಲ್ಲಿ ಬೆಂಗಳೂರು ಜಯ ಸಾಧಿಸಿದ್ದು, ಡ್ರೆಸ್ಸಿಂಗ್ ರೂಂ ನಲ್ಲಿ ಆರ್ ಸಿಬಿ ಆಟಗಾರರು ಹಾಡಿರುವ ಸಾಂಗ್ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಹಾಡಿನಲ್ಲಿ ನಾವು ಫೈನಲ್ ಗೆ ತಲುಪುತ್ತೇವೆ. ನಮ್ಮ ತಂಡ ಉತ್ತಮವಾಗಿದೆ. ಗೋಲ್ಡ್ ಲಯನ್ ಶೈನ್ ಆಗುತ್ತೆ. ನಾವು ಆರ್ ಸಿಬಿಯ ಭಾಗವಾಗಿರೋದು ನಮ್ಮ ಹೆಮ್ಮೆ ಅಂತಾ ಕೂಗಿ ಕೂಗಿ ಹೇಳಿದ್ದಾರೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಿರೋದು ನಾಯಕ ಫಾಫ್ ಡುಪ್ಲಸಿ ಅವರ ನಡೆ… ಯಾಕಂದ್ರೆ ಈ ಹಾಡನ್ನ ಶುರು ಮಾಡಿರೋದು ಫಾಫ್ ಡುಪ್ಲಸಿ, ಜೊತೆಗೆ ನಾವು ಫೈನಲ್ ತಲುಪುತ್ತೇವೆ ಅಂತಾ ಜೋಷ್ ತುಂಬುತ್ತಿರೋದು ಕೂಡ ಅವರೇ ಆಗಿದ್ದಾರೆ.
ಇದಲ್ಲದೇ ಫಾಫ್ ಡುಪ್ಲಸಿ ಅವರ ನಾಯಕತ್ವವೂ ತಂಡಕ್ಕೆ ಆನೆಬಲವನ್ನು ತಂದಿದೆ. ಎಂತಹ ಪರಿಸ್ಥಿಯಲ್ಲಾದ್ರೂ ಕಾಮ್ ಅಂಡ್ ಕೂಲ್ ಆಗಿರುವ ಫಾಫ್, ಸೈಲೆಂಟ್ ಆಗಿಯೇ ಪಂದ್ಯದ ಸ್ಥಿತಿಗತಿಯನ್ನ ಅರ್ಥ ಮಾಡಿಕೊಂಡು ಎದುರಾಳಿಗಳಿಗೆ ಖೆಡ್ಡಾ ತೋಡುತ್ತಿದ್ದಾರೆ. ಮುಖ್ಯವಾಗಿ ದಿನೇಶ್ ಕಾರ್ತಿಕ್ ವಿಚಾರದಲ್ಲಿ ಫಾಫ್ ತೆಗೆದುಕೊಳ್ಳುತ್ತಿರುವ ನಿರ್ಧಾರ, ಅವರ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಯಾಕಂದರೆ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಿದ್ರೆ ದಿನೇಶ್ ನಾಲ್ಕನೇ ಸ್ಥಾನದಲ್ಲಿ ಬ್ಯಾಟ್ ಬೀಸುತ್ತಾರೆ. ಚೇಸಿಂಗ್ ಮಾಡಿದ್ರೆ ದಿನೇಶ್ ಕಾರ್ತಿಕ್ ಏಳು ಅಥವಾ ಏಂಟನೇ ಕ್ರಮಾಂಕದಲ್ಲಿ ಬಂದು ಮ್ಯಾಚ್ ಫಿನಿಷ್ ಮಾಡುತ್ತಿದ್ದಾರೆ. ಒಬ್ಬ ಉತ್ತಮ ಆಟಗಾರನನ್ನ ಒಬ್ಬ ಉತ್ತಮ ನಾಯಕ ಹೇಗೆ ಬಳಸಿಕೊಳ್ಳುತ್ತಾನೆ ಅನ್ನೋದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ.
ಹೀಗಾಗಿ ಈ ಬಾರಿ 14 ವರ್ಷಗಳ ವನವಾಸಕ್ಕೆ ಮುಕ್ತಿ ಸಿಗಲಿದೆ ಅನ್ನೋದು ಅಭಿಮಾನಿಗಳ ವಿಶ್ವಾಸವಾಗಿದೆ. RCB Dressing Room Celebrations after a thrilling win | IPL 2022









