ADVERTISEMENT
Wednesday, June 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

MI vs LSG Match preview : ಸೇಡಿನ ಸಮರ ಶುರು.. ಗೆಲುವು ಯಾರಿಗೆ..?

Mahesh M Dhandu by Mahesh M Dhandu
April 24, 2022
in Newsbeat, Sports, ಕ್ರೀಡೆ
MI vs LSG Match preview ipl2022 saaksha tv
Share on FacebookShare on TwitterShare on WhatsappShare on Telegram

MI vs LSG Match preview : ಸೇಡಿನ ಸಮರ ಶುರು.. ಗೆಲುವು ಯಾರಿಗೆ..?

ಇಂಡಿಯನ್ ಪ್ರಿಮಿಯರ್ ಲೀಗ್ ನ 37 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಇಂದಿನ ಈ ಪಂದ್ಯ ನಡೆಯಲಿದೆ.

Related posts

FIFA World Cup 2026 Cristiano Ronaldo Lionel Messi

fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು

June 24, 2026
ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

June 24, 2026

ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ತಾನದಲ್ಲಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಆವೃತ್ತಿಯಲ್ಲಿ ಏಳು ಪಂದ್ಯಗಳನ್ನಾಡಿದೆ. ಈ ಪೈಕಿ ನಾಲ್ಕು ಪಂದ್ಯಗಳಲ್ಲಿ ಲಕ್ನೋ ತಂಡ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ಮುಂಬೈ ಇಂಡಿಯನ್ಸ್ ತಂಡ ಏಳು ಪಂದ್ಯಗಳನ್ನಾಡಿದ್ದು, ಒಂದೇ ಒಂದು ಪಂದ್ಯವನ್ನ ಈವರೆಗೂ ಗೆದ್ದಿಲ್ಲ. ಹೀಗಾಗಿ ಮೊದಲ ಗೆಲುವಿಗಾಗಿ ಇನ್ನೂ ಹಂಬಲಿಸುತ್ತಲೇ ಇದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಬೆಂಗಳೂರು ತಂಡ 18 ರನ್ ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ರಾಹುಲ್ 30 ರನ್, ಕೃನಾಲ್ 45 ರನ್ ಗಳಿಸಿದ್ದರು.

ಇತ್ತ ಮುಂಬೈ ಇಂಡಿಯನ್ಸ್ ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಚೆನ್ನೈ ತಂಡ ಮೂರು ವಿಕೆಟ್ ಗಳೊಂದಿಗೆ ಗೆಲುವು ಕಂಡಿದೆ.

ಕಳೆದ ಬಾರಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈ ತಂಡವನ್ನು 18 ರನ್ ಗಳಿಂದ ಸೋಲಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಮುಂಬೈ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.

MI vs LSG Match preview ipl2022 saaksha tv
MI vs LSG Match preview ipl2022 saaksha tv

ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ

ಲಕ್ನೋ ಸೂಪರ್ ಜೈಂಟ್ಸ್ ತಂಡ ಸಾಲಿಡ್ ಆಗಿದೆ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ. ಆದ್ರೆ ಸಾಂಘೀಕ ಆಟ ಹಾಗೂ ಅನಾನುಭವಿ ಮಿಡಲ್ ಆರ್ಡರ್ ತಂಡದ ಹಿನ್ನೆಡೆಗೆ ಕಾರಣವಾಗುತ್ತಿದೆ. ರಾಹುಲ್, ಡಿಕಾಕಾ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ಮಿಡಲ್ ಆರ್ಡರ್ ನಲ್ಲಿ ಮನೀಷ್ ಪಾಂಡೆ, ದೀಪಕ್ ಹೂಡಾ, ಆಯುಷ್ ಬಡೋನಿ ಸ್ಥಿರ ಪ್ರದರ್ಶನ ನೀಡಬೇಕಿದೆ. ಕಳೆ ಕ್ರಮಾಂಕದಲ್ಲಿ ತಂಡ ಸಾಲಿಡ್ ಆಗಿದೆ. ಮಾರ್ಕಸ್ ಸ್ಟೋಯ್ನಿಸ್, ಜೇನಸ್ ಹೋಲ್ಡರ್, ಕೃನಾಲ್ ಪಾಂಡ್ಯ ತಂಡದ ಶಕ್ತಿಯಾಗಿದ್ದಾರೆ. ಬೌಲಿಂಗ್ ನಲ್ಲಿ ಅವೇಶ್ ಖಾನ್, ದುಶ್ಮಾಂತಾ ಚಮ್ಮೀರಾ, ರವಿ ಬಿಷ್ನೋಯಿ ಒಳ್ಳೆ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪವರ್ ಪ್ಲೇನಲ್ಲಿ ಚಮೀರಾ ವಿಕೆಟ್ ಪಡೆಯುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಜೊತೆಗೆ ತಂಡದಲ್ಲಿ ಹೆಚ್ಚಿನ ಬೌಲಿಂಗ್ ಆಪ್ಷನ್ ಇರೋದು ಕೂಡ ಲಕ್ನೋ ತಂಡದ ಸ್ಟ್ರೆಂಥ್ ಆಗಿದೆ.

ಇತ್ತ ಮುಂಬೈ ಇಂಡಿಯನ್ಸ್ ತಂಡದ ವಿಚಾರಕ್ಕೆ ಬಂದರೇ ಬ್ಯಾಟಿಂಗ್ ನಲ್ಲಿ  ಪರವಾಗಿಲ್ಲ ಅನಿಸಿದ್ರೂ ಬೌಲಿಂಗ್ ವಿಭಾಗ ಸಂಪೂರ್ಣ ಕಳಫೆಯಾಗಿದೆ. ಜೊತೆಗೆ  ಸಾಂಘಿಕ ಆಟದ ಕೊರತೆ, ಸತತ ಸೋಲುಗಳು ತಂಡದಲ್ಲಿ ನಿರಾಸೆಯನ್ನು ಮೂಡಿಸಿದೆ. ಮುಂಬೈ ಪಂದ್ಯ ಗೆಲ್ಲಬೇಕಾದ್ರೆ 7 ಸೋಲುಗಳನ್ನು ಮರೆತು ಬ್ಯಾಟರ್ ಗಳು, ಬೌಲರ್ ಗಳು ಒಟ್ಟಾಗಿ  ಪ್ರದರ್ಶನ ನೀಡಬೇಕಿದೆ.

ಮುಖ್ಯವಾಗಿ ಮುಂಬೈ ತಂಡಕ್ಕೆ ಈ ಬಾರಿ ಆರಂಭಿಕರು ಕೈ ಕೊಡುತ್ತಿದ್ದಾರೆ. ರೋಹಿತ್, ಕಿಶಾನ್ ಕ್ರೀಸ್ ನಲ್ಲಿ ಹೆಚ್ಚು ಕಾಲ ನಿಲ್ಲುತ್ತಲೇ ಇಲ್ಲ. ಡೆವಾಲ್ಡ್ ಬ್ರೆವಿಸ್ ಮಿಂಚಿ ಮರೆಯಾಗುತ್ತಿದ್ದಾರೆ. ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ ಇಬ್ಬರೇ ಮುಂಬೈನ ಸದ್ಯದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಕಿರಾನ್ ಪೊಲಾರ್ಡ್, ಡೆನಿಯನ್ ಸ್ಯಾಮ್ ಆಲ್ ರೌಂಡರ್ ಆಟ ಪ್ರದರ್ಶಿಸುತ್ತಿಲ್ಲ. ರಿಲೆ ಮೆರೆಡಿತ್, ಹೃತಿಕ್ ಶೋಕಿನ್, ಬೂಮ್ರಾ, ಜಯದೇವ್ ಉನಾದ್ಕಟ್ ಬೌಲಿಂಗ್ ನಲ್ಲಿ ಪರಿಣಾಮಕಾರಿಯಾಗಿಲ್ಲ. ಸದ್ಯ ಮುಂಬೈ ಫಾರ್ಮ್ ಅತ್ಯಂತ ಕಳಪೆಯಾಗಿದ್ದು, ಇಂದಿನ ಪಂದ್ಯಕ್ಕಾಗಿ ತಂಡದಲ್ಲಿ ಬದಲಾವಣೆಗನ್ನು ನಿರೀಕ್ಷಿಸಲಾಗಿದೆ.      

Tags: #Saaksha TVCricketLSGmiMI vs LSG
ShareTweetSendShare
Join us on:

Related Posts

FIFA World Cup 2026 Cristiano Ronaldo Lionel Messi

fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು

by admin
June 24, 2026
0

  ಸಿಆರ್ & ಎಲ್‍ಎಂ..! ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ ಎರಡು ಅತ್ಯದ್ಭುತವಾದ ಮಾನವ ಯಂತ್ರಗಳು. ಹೌದು, 1985 ಮಾಡೆಲ್, ಪೋರ್ಚ್‍ಗಲ್ ಬ್ರ್ಯಾಂಡ್, ಚಾಸಿಸ್ ನಂಬರ್...

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

by Shwetha
June 24, 2026
0

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪ್ರಕರಣವು ರಾಜ್ಯ ಬಿಜೆಪಿಯಲ್ಲಿ ದೊಡ್ಡ ಮಟ್ಟದ ರಾಜಕೀಯ ಭೂಕಂಪಕ್ಕೆ ಕಾರಣವಾಗಿದೆ. ಇದು ಕೇವಲ ಒಂದು ಸೋಲಲ್ಲ, ಬದಲಾಗಿ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಎಡವಟ್ಟು; ಮಹಾಲೇಖಪಾಲರ ಕಚೇರಿಯಿಂದ ಸ್ಪಷ್ಟನೆ ಕೋರಿದ ಸರ್ಕಾರ

by Shwetha
June 24, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವು ಲೋಪದೋಷಗಳು ಪತ್ತೆಯಾಗಿದ್ದು, ಈ ಕುರಿತು ಮಹಾಲೇಖಪಾಲರ ಕಚೇರಿ (CAG) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಲಿಖಿತ ಸ್ಪಷ್ಟನೆ...

ಈಶ್ವರಪ್ಪಗೆ ಮಾನಸಿಕ ಸ್ಥಿಮಿತ ತಪ್ಪಿದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ: ಭ್ರಷ್ಟಾಚಾರದ ಇತಿಹಾಸ ಇಟ್ಟುಕೊಂಡು ಬೇರೆಯವರನ್ನು ಟೀಕಿಸಬೇಡಿ – ಶಿವರಾಮ್ ಹೆಬ್ಬಾರ್ ಆಕ್ರೋಶ

ಈಶ್ವರಪ್ಪಗೆ ಮಾನಸಿಕ ಸ್ಥಿಮಿತ ತಪ್ಪಿದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ: ಭ್ರಷ್ಟಾಚಾರದ ಇತಿಹಾಸ ಇಟ್ಟುಕೊಂಡು ಬೇರೆಯವರನ್ನು ಟೀಕಿಸಬೇಡಿ – ಶಿವರಾಮ್ ಹೆಬ್ಬಾರ್ ಆಕ್ರೋಶ

by Shwetha
June 24, 2026
0

ಶಿರಸಿ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣವಾಗಿ ರಾಜಕೀಯ ದಿವಾಳಿತನಕ್ಕೆ ತಲುಪಿದ್ದಾರೆ ಎಂದು ಶಾಸಕ ಶಿವರಾಮ್ ಹೆಬ್ಬಾರ್...

ಡಿಕೆಶಿ ತಂತ್ರಕ್ಕೆ ಬಿಜೆಪಿ ತತ್ತರ: ಕೈ ಅಭ್ಯರ್ಥಿ ಗೆಲುವಿನ ಹಿಂದೆ ಅಡಗಿದೆಯೇ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ; ವಿಜಯೇಂದ್ರ ಮತ್ತು ಅಶೋಕ ನಾಯಕತ್ವಕ್ಕೆ ಎದುರಾಯ್ತು ಗಂಡಾಂತರ!

ಅಡ್ಡಮತದಾನ ವಿಚಾರ; ಧರ್ಮಸ್ಥಳದಲ್ಲಿ ಸಭೆ ಇಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ: ಆರ್. ಅಶೋಕ್

by Shwetha
June 24, 2026
0

ವಿಧಾನ ಪರಿಷತ್ (MLC) ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದ ವಿಚಾರವಾಗಿ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram