ADVERTISEMENT
Friday, April 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

LSG vs PBKS Match | ಸ್ನೇಹಿತರ ಸಮರದಲ್ಲಿ ಸೋತ “ಕಿಂಗ್ಸ್”

Mahesh M Dhandu by Mahesh M Dhandu
April 30, 2022
in Newsbeat, Sports, ಕ್ರೀಡೆ
ipl-2022-lsg playing 11 for today match saaksha tv

ipl-2022-lsg playing 11 for today match saaksha tv

Share on FacebookShare on TwitterShare on WhatsappShare on Telegram

LSG vs PBKS Match | ಸ್ನೇಹಿತರ ಸಮರದಲ್ಲಿ ಸೋತ “ಕಿಂಗ್ಸ್”

ಸ್ನೇಹಿತರ ಸೆಣಸಾಟದಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮಯಾಂಕ್ ಅಗರ್ ವಾಲ್ ಸಾರಥ್ಯದ  ಪಂಜಾಬ್ ಕಿಂಗ್ಸ್ ವಿರುದ್ಧ 20 ರನ್ ಗಳಿಂದ ಗೆಲುವು ಸಾಧಿಸಿದೆ.

Related posts

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

April 17, 2026
ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

April 17, 2026

ಇದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇ ಆಫ್ಸ್ ಗೆ ಮತ್ತಷ್ಟು ಹತ್ತಿರವಾಗಿದೆ.

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, 20 ಓವರ್ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 153 ರನ್ ಗಳಿಸಿದರು.

ಈ ಪೈಪೋಟಿಯ ಮೊತ್ತ ಬೆನ್ನತ್ತಿದ ಪಂಜಾಬ್ ಕಿಂಗ್ಸ್, 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್ಗಳಿಸುವ ಮೂಲಕ 20 ರನ್ಗಳ ಸೋಲೊಪ್ಪಿಕೊಂಡಿತು.   

ಲಕ್ನೋ ನೀಡಿದ 154 ರನ್ಗಳ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್, ಶಿಖರ್ ಧವನ್ ಉತ್ತಮ ಅಡಿಪಾಯ ಹಾಕಿಕೊಡಲಿಲ್ಲ.

ಮಯಾಂಕ್ 25ಕ್ಕೆ ಔಟ್ ಆದ್ರೆ ಧವನ್ 5 ರನ್ ಗಳಿಗೆ ಸುಸ್ತಾದ್ರು.  ನಂತರ ಕಣಕ್ಕಿಳಿದ ಜಾನಿ ಬೈರ್ಸ್ಟೋವ್ 32 ರನ್ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು.

ಮಧ್ಯಮ ಕ್ರಮಾಂಕದಲ್ಲಿ ಬಂದ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಮುಗ್ಗರಿಸಿದರು.

ಬನುಕಾ ರಾಜಪಕ್ಸ(9), ಲಿಯಾಮ್ ಲಿವಿಂಗ್ಸ್ಟೋನ್(18), ಜಿತೇಶ್ ಶರ್ಮ(2), ಕಗೀಸೋ ರಬಾಡ(2), ರಾಹುಲ್ ಚಹರ್(4) ಉತ್ತಮ ಪ್ರದರ್ಶನ ನೀಡುವಲ್ಲಿ ಮುಗ್ಗರಿಸಿದರು.

lsg-vs-pbks-match-Lucknow defeat Punjab by 20 runs saaksha tv
lsg-vs-pbks-match-Lucknow defeat Punjab by 20 runs saaksha tv

ರಿಷಿ ಧವನ್ (21*) ರನ್ಗಳಿಸಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಲಕ್ನೋ ಸೂಪರ್ ಜೈಂಟ್ಸ್ಗೆ ಬೌಲರ್ಗಳು ಸಾಂಘಿಕ ಪ್ರದರ್ಶನದ ಮೂಲಕ ಆಸರೆಯಾದರು.

ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ ಮೊಸಿನ್ ಖಾನ್ ಮೂರು ವಿಕೆಟ್ ಪಡೆದ್ರೆ, ಕೃನಾಲ್ ಪಾಂಡ್ಯ, ದುಶ್ಮಂತಾ ಚಮೀರ ತಲಾ 2 ವಿಕೆಟ್ ಪಡೆದರು.  

ಇನ್ನು ಇದಕ್ಕೂ ಮುನ್ನಾ  ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ನಿರೀಕ್ಷಿತ ಆರಂಭ ಪಡೆಯಲಿಲ್ಲ.

ಇನ್ನಿಂಗ್ಸ್‌ ಆರಂಭಿಸಿದ ನಾಯಕ ಕೆ.ಎಲ್. ರಾಹುಲ್‌ 6 ರನ್ ಸಿಡಿಸಿ ಬಹುಬೇಗನೆ ನಿರ್ಗಮಿಸಿದರು.

ನಂತರ ಜೊತೆಯಾದ ಕ್ವಿಂಟನ್‌ ಡಿಕಾಕ್‌ – ದೀಪಕ್ ಹೂಡಾ ಜೋಡಿ 85 ರನ್ ಗಳ ಜೊತೆಯಾಟ ನೀಡಿದರು.

ಡಿ ಕಾಕ್ 46 ರನ್‌, ದೀಪಕ್‌ ಹೂಡ 34 ರನ್‌ ಗಳಿಸಿದರು. ನಂತರ ಕಣಕ್ಕಿಳಿದ ಕೃನಾಲ್‌ ಪಾಂಡ್ಯ(7), ಸ್ಟಾಯ್ನಿಸ್(6), ಬಡೋನಿ(4) ಹಾಗೂ ಜೇಸನ್‌ ಹೋಲ್ಡರ್‌(11) ಬಹುಬೇಗನೆ ವಿಕೆಟ್‌ ಒಪ್ಪಿಸಿ ಹೊರ ನಡೆದರು.

ಕೊನೆಯಲ್ಲಿ ದುಶ್ಮಂತ ಚಮೀರ(17), ಮೊಸಿನ್‌ ಖಾನ್‌(13*) ಹಾಗೂ ಆವೇಶ್‌ ಖಾನ್(2)‌ ಉಪಯುಕ್ತ ರನ್‌ ಕಲೆಹಾಕಿದರು.

ಪಂಜಾಬ್‌ ಕಿಂಗ್ಸ್‌ ಪರ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ಕಗೀಸೋ ರಬಾಡ ನಾಲ್ಕು ವಿಕೆಟ್ ಪಡೆದರು.

lsg-vs-pbks-match-Lucknow defeat Punjab by 20 runs

Tags: #Saaksha TVCricketIPLLSG vs PBKS
ShareTweetSendShare
Join us on:

Related Posts

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

by Shwetha
April 17, 2026
0

ನವದೆಹಲಿ ಲೋಕಸಭೆಯಲ್ಲಿ ನಿನ್ನೆ ನಡೆದ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳ ಮೇಲಿನ ಸುದೀರ್ಘ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು...

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

by Shwetha
April 17, 2026
0

ಬೆಂಗಳೂರು ಅಥವಾ ಇತರ ನಗರಗಳಲ್ಲಿ ಪರಿಚಯವಿಲ್ಲದ ಮಹಿಳೆಯರನ್ನು ಅಥವಾ ಸಹೋದ್ಯೋಗಿಗಳನ್ನು ಆಂಟಿ ಎಂದು ಕರೆಯುವುದು ಹಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಕೆಲವರು ಗೌರವದಿಂದ ಕರೆದರೆ, ಇನ್ನು ಕೆಲವರು ಗೇಲಿ ಮಾಡಲು...

ಪ್ರತ್ಯೇಕ ಪಹಣಿ (RTC) ಪಡೆಯಲು ಪೋಡಿ ಏಕೆ ಮುಖ್ಯ? ಪೋಡಿ ಇಲ್ಲದೆ ಜಮೀನು ಮಾರಲು ಸಾಧ್ಯವೇ?

ಪ್ರತ್ಯೇಕ ಪಹಣಿ (RTC) ಪಡೆಯಲು ಪೋಡಿ ಏಕೆ ಮುಖ್ಯ? ಪೋಡಿ ಇಲ್ಲದೆ ಜಮೀನು ಮಾರಲು ಸಾಧ್ಯವೇ?

by Shwetha
April 17, 2026
0

ಗ್ರಾಮೀಣ ಭಾಗದ ರೈತರಲ್ಲಿ ಜಮೀನಿನ ಹಕ್ಕು ಮತ್ತು ಗಡಿ ವಿವಾದಗಳು ಸರ್ವೇ ಸಾಮಾನ್ಯ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇ ಪೋಡಿ. ಬಹುತೇಕ ರೈತರಿಗೆ ಪೋಡಿ ಎಂದರೆ ಏನು,...

ಯೋಗೇಶ್ ಗೌಡ ಹತ್ಯೆ ಪ್ರಕರಣ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿ ಪಾಪಪ್ರಜ್ಞೆಯಿಂದ ಸತ್ಯ ಬಿಚ್ಚಿಟ್ಟ ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ

ಯೋಗೇಶ್ ಗೌಡ ಹತ್ಯೆ ಪ್ರಕರಣ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿ ಪಾಪಪ್ರಜ್ಞೆಯಿಂದ ಸತ್ಯ ಬಿಚ್ಚಿಟ್ಟ ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ

by Shwetha
April 17, 2026
0

ಧಾರವಾಡದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಸೃಷ್ಟಿಸಿದೆ. ಹಲವು ವರ್ಷಗಳಿಂದ ಕುತೂಹಲ ಕೆರಳಿಸಿದ್ದ ಈ...

ನಿಮ್ಮ ಪ್ಲಾನ್ ನೋಡಿ ಚಾಣಕ್ಯನೇ ಬೆಚ್ಚಿ ಬೀಳುತ್ತಿದ್ದ ಅಮಿತ್ ಶಾ ಗೆ ಪ್ರಿಯಾಂಕಾ ಗಾಂಧಿ ನೀಡಿದ ಖಡಕ್ ತಿರುಗೇಟು

ನಿಮ್ಮ ಪ್ಲಾನ್ ನೋಡಿ ಚಾಣಕ್ಯನೇ ಬೆಚ್ಚಿ ಬೀಳುತ್ತಿದ್ದ ಅಮಿತ್ ಶಾ ಗೆ ಪ್ರಿಯಾಂಕಾ ಗಾಂಧಿ ನೀಡಿದ ಖಡಕ್ ತಿರುಗೇಟು

by Shwetha
April 17, 2026
0

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ನಡೆದ ಚರ್ಚೆಯು ಕೇವಲ ರಾಜಕೀಯ ಸಂಘರ್ಷಕ್ಕೆ ಮಾತ್ರವಲ್ಲದೆ ಹಾಸ್ಯ ಮತ್ತು ಚುಚ್ಚುಮಾತಿನ ಪ್ರಸಂಗಗಳಿಗೂ ಸಾಕ್ಷಿಯಾಯಿತು. ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram