Deaflympics 2022 : ಚರಿತ್ರೆ ಸೃಷ್ಠಿಸಿದ ದೀಕ್ಷಾ ಡಾಗರ್
ಬ್ರೆಜಿಲ್ನಲ್ಲಿ ನಡೆಯುತ್ತಿರುವ ಡೆಫ್ ಒಲಿಂಪಿಕ್ಸ್ನಲ್ಲಿ ಭಾರತದ ಮಹಿಳಾ ಗಾಲ್ಫ್ ಆಟಗಾರ್ತಿ ದೀಕ್ಷಾ ಡಾಗರ್ ಚಿನ್ನ ಗೆದ್ದಿದ್ದಾರೆ.
ಗುರುವಾರ ಅಮೆರಿಕದ ಗ್ರೇಸ್ ಜಾನ್ಸನ್ ವಿರುದ್ಧ ನಡೆದ ಪಂದ್ಯದಲ್ಲಿ 5-4 ಅಂತರದಲ್ಲಿ ಜಯ ಸಾಧಿಸಿ ಡಾಗರ್ ಅವರು ಸ್ವರ್ಣಕ್ಕೆ ಮುತ್ತಿಟ್ಟಿದ್ದಾರೆ.
ಇದು ದೀಕ್ಷಾ ಡಾಗರ್ ಅವರಿಗೆ ಒಲಿಂಪಿಕ್ಸ್ನಲ್ಲಿ ಎರಡನೇ ಪದಕವಾಗಿದೆ. ಈ ಹಿಂದೆ 2017ರಲ್ಲಿ ಬೆಳ್ಳಿ ಗೆದ್ದಿದ್ದರು.

ಒಟ್ಟಾರೆ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ಏಕೈಕ ಭಾರತೀಯ ಗಾಲ್ಫ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ದೀಕ್ಷಾ ಡಾಗರ್ ಪಾತ್ರರಾಗಿದ್ದಾರೆ.
2020ರ ಟೋಕಿಯೊ ಒಲಿಂಪಿಕ್ಸ್ ಗೆ ಕೊನೆಯ ಕ್ಷಣದಲ್ಲಿ ಅರ್ಹತೆ ಪಡೆದ ದೀಕ್ಷಾ ಡಾಗರ್ ಒಲಿಂಪಿಕ್ಸ್ ಹಾಗೂ ಡೆಫ್ ಒಲಿಂಪಿಕ್ಸ್ನಲ್ಲಿ ಆಡಿದ ಮೊದಲ ಗಾಲ್ಫ್ ಆಟಗಾರ್ತಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಇದಕ್ಕೂ ಮುನ್ನ ಬುಧವಾರ ನಡೆದ ಸೆಮಿಫೈನಲ್ನಲ್ಲಿ 21ರ ಹರೆಯದ ದೀಕ್ಷಾ ಆಂಡ್ರಿಯಾ ಹೊವ್ಸ್ಟೈನ್ (ನಾರ್ವೆ) ಅವರನ್ನು ಸೋಲಿಸಿದ್ದರು.








