Vijay Devarakonda-Samantha : ವಿಜಯ್ ದೇವರಕೊಂಡ – ಸಮಂತಾ ಲಿಪ್ ಲಾಕ್…?!
ರೌಡಿ ಹೀರೋ ವಿಜಯ್ ದೇವರಕೊಂಡ ಹಾಗೂ ಸ್ಟಾರ್ ಹೀರೋಯಿನ್ ಸಮಂತಾ ಅಭಿನಯದ ಲವ್ ಸ್ಟೋರಿ ‘ಖುಷಿ‘.
ಪ್ರೇಮಕಥೆಯ ಚಿತ್ರಗಳಿಗೆ ಕೇರ್ ಆಫ್ ಅಡ್ರೆಸ್ ಆಗಿರುವ ಶಿವ ನಿರ್ವಾಣ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ವಿಜಯ್-ಸಮಂತಾ ಜೊತೆಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗಿನಿಂದಲೂ ಚಿತ್ರದ ಬಗ್ಗೆ ಕುತೂಹಲ ಮೂಡಿದೆ.
ಇತ್ತೀಚೆಗಷ್ಟೇ ಈ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಇಂಟೆನ್ಸ್ ಸ್ಟೋರಿಯಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ವಿಜಯ್ ಮತ್ತು ಸ್ಯಾಮ್ ನಡುವಿನ ಚುಂಬನದ ದೃಶ್ಯಗಳು ಹೆಚ್ಚು ಇರುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.
ಕಥೆಗೆ ಬೇಡಿಕೆ ಬಂದ ಕಾರಣ ನಿರ್ದೇಶಕ ಶಿವ ನಿರ್ವಾಣ ಈ ದೃಶ್ಯಗಳನ್ನು ಕ್ರಿಯೇಟ್ ಮಾಡಿದ್ದಾರೆ ಎಂದು ತಿಳಿದು ಬರುತ್ತಿದೆ.
ವಿಜಯ್-ಸಮಂತಾ ಲಿಪ್ಲಾಕ್ ದೃಶ್ಯಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ.
ಈ ಸುದ್ದಿ ಎಷ್ಟು ಸತ್ಯ ಅನ್ನೋದಕ್ಕೆ ಸಿನಿಮಾ ರಿಲೀಸ್ ಆಗುವವರೆಗೆ ಹೇಳಲು ಸಾಧ್ಯವಿಲ್ಲ. ಕಳೆದ ಕೆಲವು ದಿನಗಳಿಂದ ಚಿತ್ರದ ಚಿತ್ರೀಕರಣ ಕಾಶ್ಮೀರ ಮತ್ತು ಸುತ್ತಮುತ್ತ ನಡೆಯುತ್ತಿದೆ.samantha-lip-lock-scene-vijay-devarakonda-kushi